ಶ್ರೀನಗರ: ಕಳೆದ ವಾರ ರಾಹುಲ್ ಭಟ್ ಅವರನ್ನು ಅವರ ಕಚೇರಿಯೊಳಗೆ ಉಗ್ರರು ಹತ್ಯೆಗೈದಿದ್ದನ್ನು ಖಂಡಿಸಿ ಕಾಶ್ಮೀರಿ ಪಂಡಿತರ ಪ್ರತಿಭಟನೆಯು ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಮತ್ತು ಅನತ್‌ನಾಗ್ ಜಿಲ್ಲೆಗಳಲ್ಲಿ ಸೋಮವಾರವೂ ಮುಂದುವರೆದಿದೆ.
ಹಲವಾರು ಕಾಶ್ಮೀರಿ ಪಂಡಿತರು ಗಂದರ್‌ಬಾಲ್ ಜಿಲ್ಲೆಯ ತುಲ್ಮುಲ್ಲಾದಲ್ಲಿ ತಮ್ಮ ಸಮುದಾಯದ ಸದಸ್ಯರ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾಕಾರರು ಮೇ 12 ರಂದು ಬುದ್ಗಾಮ್ ಜಿಲ್ಲೆಯ ಚದೂರದಲ್ಲಿರುವ ತಮ್ಮ ಕಚೇರಿಯೊಳಗೆ ಉಗ್ರರಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ ಭಟ್ ಅವರ ಛಾಯಾಚಿತ್ರಗಳನ್ನು ಹಿಡಿದುಕೊಂಡು “ನಮಗೆ ನ್ಯಾಯ ಬೇಕು” ಎಂಬ ಘೋಷಣೆಗಳನ್ನು ಕೂಗಿದ್ದಾರೆ.
ಅನಂತನಾಗ್‌ನಲ್ಲಿಯೂ ಇದೇ ರೀತಿಯ ಪ್ರತಿಭಟನೆಗಳು ನಡೆದವು, ಅಲ್ಲಿ ಪ್ರತಿಭಟನಾಕಾರರು ಸರ್ಕಾರದ ಪ್ರತಿಕೃತಿಗಳನ್ನು ದಹಿಸಿದರು.
ಭಟ್ ಹತ್ಯೆಯ ಕುರಿತು ವಿಶೇಷ ತನಿಖಾ ತಂಡದಿಂದ ತನಿಖೆಗೆ ಕೇಂದ್ರಾಡಳಿತ ಪ್ರದೇಶ ಆಡಳಿತ ಆದೇಶಿಸಿದೆ.