Advertisement

ರಾಷ್ಟ್ರಗೀತೆ ಅಗೌರವದ ವಿಡಿಯೋ ಫೇಕ್‌: ಕಾಶ್ಮೀರ ವಿವಿ ಸ್ಪಷ್ಟನೆ

03:58 PM Jul 05, 2018 | Team Udayavani |

ಹೊಸದಿಲ್ಲಿ : ಘಟಿಕೋತ್ಸವದ ಸಂದರ್ಭದಲ್ಲಿ ರಾಷ್ಟ್ರಗೀತೆ ನುಡಿಸಲಾದಾಗ ಕುಳಿತೇ ಇರುವ ಮೂಲಕ ಕೆಲವು ವಿದ್ಯಾರ್ಥಿಗಳು ರಾಷ್ಟ್ರಗೀತೆಗೆ ಅಗೌರವ ತೋರಿಸಿದರೆಂಬುದನ್ನು ಕಾಣಿಸುವ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋ “ಫೇಕ್‌’ ಎಂದು ಕಾಶ್ಮೀರದ ಸೆಂಟ್ರಲ್‌ ಯುನಿವರ್ಸಿಟಿ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. 

Advertisement

“ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವಿಡಿಯೋ ಫೇಕ್‌ ಆಗಿದೆ. ವಾಸ್ತವದಲ್ಲಿ ರಾಷ್ಟ್ರ ಗೀತೆ ನುಡಿಸಲಾದಾಗ ಮತ್ತು ಶೈಕ್ಷಣಿಕ ಮೆರವಣಿಗೆ ನಡೆದಾಗ ಎಲ್ಲ ವಿದ್ಯಾರ್ಥಿಗಳು ಮತ್ತು ಆಹ್ವಾನಿತ ಗಣ್ಯರು ನಿಂತುಕೊಂಡೇ ಇದ್ದರು. ಯಾರೂ ರಾಷ್ಟ್ರಗೀತೆಗೆ ಅಗೌರವ ತೋರಿಲ್ಲ’ ಎಂದು ವಿವಿ ಪ್ರಕಟನೆ ಹೇಳಿದೆ. 

ಕಾಶ್ಮೀರ ವಿಶ್ವವಿದ್ಯಾಲಯದ ಘಟಿಕೋತ್ಸವ ಜು.4ರಂದು ನಡೆದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next