Advertisement
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಮನೋಜ್ ಪಾಂಡೆ ಸೇರಿ ಅನೇಕ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಕುಲ್ಗಾಮ ಜಿಲ್ಲೆಯ ಅರ್ರೆàಹ್ ಪ್ರದೇಶದಲ್ಲಿ ಜೂ.2ರಂದು ಉಗ್ರರ ಗುಂಡಿನೇಟಿನಿಂದಾಗಿ ಸಾವನ್ನಪ್ಪಿದ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ರಾಜಸ್ಥಾನದ ಹನುಮಾನ್‌ಗಢದ ಭಗವಾನ್ ಎಂಬ ಹಳ್ಳಿಯಲ್ಲಿ ನಡೆಸಲಾಯಿತು. ವಿಜಯ್ ಕುಮಾರ್‌ಗೆ ಹುತಾತ್ಮರು ಎಂದು ಸರ್ಕಾರ ಗೌರವಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹೈಕೋರ್ಟ್ ಮೊರೆ ಹೋದ ಪಂಡಿತರು
ಕಾಶ್ಮೀರದಲ್ಲಿ ಉಗ್ರರ ಗುಂಡಿನೇಟಿಗೆ ಪಂಡಿತರು ಬಲಿಯಾಗುತ್ತಿರುವ ವಿಚಾರದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಬೇಕೆಂದು ಕಾಶ್ಮೀರ್ ಪಂಡಿತ್ ಸಂಘರ್ಷ ಸಮಿತಿ(ಕೆಪಿಎಸ್‌ಎಸ್)ಯು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಪಂಡಿತರನ್ನು ಆದಷ್ಟು ಬೇಗ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಇದೇ ವೇಳೆ “ಕಾಶ್ಮೀರಿ ಪಂಡಿತರು ಯಾರೂ ಕಾಶ್ಮೀರ ತೊರೆಯಬಾರದು. ಇಲ್ಲೇ ಶಾಂತಿ ಮತ್ತು ಗೌರವಯುತವಾಗಿ ಬದುಕಬೇಕು’ ಎಂದು ಕಾಶ್ಮೀರದ ಗ್ರ್ಯಾಂಡ್ ಮುಫ್ತಿ ನಸೀರ್-ಉಲ್-ಇಸ್ಲಾಂ ಹೇಳಿದ್ದಾರೆ.