Advertisement

Kashmir;ಅನಂತ್‌ನಾಗ್‌ನಲ್ಲಿ ಗುಲಾಂ ನಬಿ vs ಮೆಹಬೂಬಾ ಮುಫ್ತಿ

12:44 AM Apr 08, 2024 | Team Udayavani |

ಶ್ರೀನಗರ: ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಅನಂತ್‌ನಾಗ್‌-ರಜೌರಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದು ಅವರ ಪಕ್ಷ ಘೋಷಿಸಿದೆ. ಇದೇ ಕ್ಷೇತ್ರದಿಂದ ಡಿಪಿಎಪಿ ಮುಖ್ಯಸ್ಥ ಗುಲಾಂ ನಬಿ ಆಜಾದ್‌ ಕೂಡ ಕಣಕ್ಕಿಳಿದಿದ್ದು, ಕಣಿವೆಯ ಇಬ್ಬರು ಘಟಾನುಘಟಿ ನಾಯಕರ ನಡುವಿನ ಪ್ರಬಲ ಸ್ಪರ್ಧೆಗೆ ಅನಂತ್‌ನಾಗ್‌ ಸಾಕ್ಷಿ ಯಾಗಲಿದೆ.

Advertisement

ಅನಂತ್‌ನಾಗ್‌ನ ಬಿಜ್‌ಬೆಹ್ರಾ ಮೂಲ ದವರಾದ ಮೆಹಬೂಬಾ ಈ ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ. ಆಜಾದ್‌ಗೂ ಇಲ್ಲಿ ಗೆಲುವು ಅನಿವಾರ್ಯ ಆಗಿರುವ ಕಾರಣ ಕೌತುಕ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next