Advertisement

Kashmir; ಒಳನುಸುಳಲು ಯತ್ನಿಸಿದ ಉಗ್ರನ ಹತ್ಯೆ

01:13 AM Apr 06, 2024 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಉಗ್ರರ ಒಳ ನುಸುಳುವಿಕೆ ವಿಫ‌ಲಗೊಳಿಸಲಾ ಗಿದೆ. ಖಚಿತ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಸೇನಾಪಡೆ ಉರಿ ಪ್ರದೇಶದಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಉಗ್ರನನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ಈ ಸಂದರ್ಭದಲ್ಲಿ ಉಗ್ರರು ಸೇನಾಪಡೆಗಳನ್ನು ಗುರಿಯಾಗಿಸಿ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಉಗ್ರ ಅಸುನೀಗಿದ್ದು ದೃಢಪಟ್ಟಿದೆ. ಮೊದಲ ಹಂತದ ಲೋಕಸಭೆ ಚುನಾವಣೆ ಆರಂಭವಾಗುವುದಕ್ಕೂ ಮೊದಲೇ ಸೇನಾಪಡೆಗೆ ಮಹತ್ವದ ಯಶಸ್ಸು ದೊರಕಿದೆ. ಘಟನ ಸ್ಥಳದಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next