Advertisement
ಉಗ್ರರು ಅಡಗಿರುವ ಮಾಹಿತಿ ಸಿಕ್ಕ ಹಿನ್ನೆಲೆ ಶನಿವಾರವೇ ಭದ್ರತಾ ಪಡೆಗಳು ಅವಳಿ ಎನ್‌ಕೌಂಟರ್ ಆರಂಭಿಸಿದ್ದವು. ಉಗ್ರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದ್ದು, ಕಾರ್ಯಾಚರಣೆಯಲ್ಲಿ 8 ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಪೈಕಿ ಮೊಡೆರ್‌ಗಾಮ್‌ನಲ್ಲಿ ಇಬ್ಬರು ಉಗ್ರರ ಶವ, ಚಿನ್ನಿಗಾಮ್‌ನಲ್ಲಿ ನಾಲ್ವರ ಶವ ಸಿಕ್ಕಿ ದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಡಿಜಿಪಿ ಆರ್‌ಆರ್ ಸ್ವೆ„ನ್ ಹೇಳಿದ್ದಾರೆ.
ರಿಯಾಸಿ ಬಸ್ ದಾಳಿ ಸೇರಿ ಕಾಶ್ಮೀರ ದಲ್ಲಿ ನಡೆದ ಸರಣಿ ಉಗ್ರ ಕೃತ್ಯಗಳ ಹಿಂದೆ ಲಷ್ಕರ್-ಎ- ತೋಯ್ಬಾದ ಉಪ ಸಂಘಟನೆ ದಿ ರೆಸಿಸ್ಟೆಂಟ್ ಫ್ರಂಟ್‌ನ ಮೋಸ್ಟ್ ವಾಂಟೆಡ್ ಉಗ್ರ ಶೈಫುಲ್ಲಾ ಸಾಜಿದ್ ಜೆಟ್‌ನ ಕೈವಾಡ ಇದೆ ಎನ್‌ಐಎ ತಿಳಿಸಿದೆ. ಈತ ಪಾಕ್‌ನಲ್ಲಿದ್ದು ಕೊಂಡೇ ಭಾರತದಲ್ಲಿ ಉಗ್ರ ಕೃತ್ಯಕ್ಕೆ ಪಿತೂರಿ ರೂಪಿಸಿದ್ದಾನೆ. ಉಗ್ರರು ಭಾರತಕ್ಕೆ ಪ್ರವೇಶಿಸಲು ಸಹಾಯ ಮಾಡುವುದೇ ಈತನ ಕೆಲಸ. ಇವನ ತಲೆಗೆ 10 ಲಕ್ಷ ಬಹುಮಾನ ಘೋಷಿಸಲಾಗಿದೆ.