Advertisement
ವಿಶ್ವಸಂಸ್ಥೆಯಲ್ಲಿ ನಡೆದಿರುವುದು ಒಂದು ಅನೌಪಚಾರಿಕ ರಹಸ್ಯ ಮಾತುಕತೆ. ಇದು ವಿಶ್ವಸಂಸ್ಥೆಯ ಕಡತಗಳಲ್ಲೂ ದಾಖಲಾಗುವುದಿಲ್ಲ ಹಾಗೂ ವಿಶ್ವಸಂಸ್ಥೆಯಾಗಲಿ , ಭದ್ರತಾ ಮಂಡಳಿಯಲ್ಲಿರುವ ಯಾವ ದೇಶವಾಗಲಿ ಈ ಕುರಿತು ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಆದರೆ 1971ರ ಬಳಿಕ ಇದೇ ಮೊದಲ ಬಾರಿಗೆ ಕಾಶ್ಮೀರ ವಿಚಾರ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆಗೆ ಬಂತು ಎನ್ನುವುದು ನಮಗಾಗಿರುವ ಒಂದು ಹಿನ್ನಡೆ ಹೌದು. ಪಾಕಿಸ್ಥಾನ ಇದನ್ನೇ ಒಂದು ದೊಡ್ಡ ಗೆಲುವು ಎಂಬಂತೆ ಬಿಂಬಿಸಿಕೊಂಡು ಖುಷಿಪಡುತ್ತಿದೆ.
Related Articles
Advertisement
ಒಂದು ಕಾಲದಲ್ಲಿ ಪಾಕ್‌ನ ಪರಮಾಪ್ತ ಮಿತ್ರನಾಗಿದ್ದ ಅಮೆರಿಕ ಕೂಡಾ ಈಗ ಕಾಶ್ಮೀರ ವಿಚಾರದಲ್ಲಿ ವಿಶೇಷ ಆಸಕ್ತಿ ಹೊಂದಿಲ್ಲ. ಕೆಲ ದಿನಗಳ ಹಿಂದೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚಿತಾವಣೆಯಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಾಶ್ಮೀರ ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವ ಕೊಡುಗೆ ನೀಡಿದ್ದರೂ ಈಗ ಅದು ನೇಪಥ್ಯಕ್ಕೆ ಸರಿದಾಗಿದೆ. ಭದ್ರತಾ ಮಂಡಳಿಯ ಸಭೆಯ ಮೊದಲು ಇಮ್ರಾನ್ ಖಾನ್, ಟ್ರಂಪ್‌ಗೆ ಫೋನ್ ಮಾಡಿ ನೆರವು ಕೇಳಿದ್ದರು. ಆದರೆ ಟ್ರಂಪ್ ನೀವು-ನಿವೇ ಬಗೆಹರಿಸಿಕೊಳ್ಳಿ ಎನ್ನುವ ಮೂಲಕ ದ್ವಿಪಕ್ಷೀತ ವಿಚಾರ ಎಂಬ ಭಾರತದ ನಿಲುವನ್ನು ಬೆಂಬಲಿಸಿದ್ದಾರೆ. ಫ್ರಾನ್ಸ್, ರಷ್ಯಾ, ಜರ್ಮನಿ ಸೇರಿ ಎಲ್ಲಾ ಪ್ರಮುಖ ದೇಶಗಳು ಪಾಕ್ ಬೇಡಿಕೆಯನ್ನು ನಿರಾಕರಿಸಿವೆ. ಅದರಲ್ಲೂ ರಷ್ಯಾ ಬಹಿರಂಗವಾಗಿಯೇ ಭಾರತದ ನಿಲುವು ಸರಿ ಎನ್ನುವುದನ್ನು ಒಪ್ಪಿಕೊಂಡಿದೆ.
370 ವಿಧಿಯನ್ನು ರದುಉಪಡಿಸಿದ ಬಳಿಕ ಕಾಶ್ಮೀರದಲ್ಲಿ ಯಾವುದೇ ಹಿಂಸಾಚಾರದ ಘಟನೆಗಳು ನಡೆದಿಲ್ಲ ಎನ್ನುವುದು ನಿಜ. ಈಗ ಅಲ್ಲಿ ನೆಲೆಸಿರುವುದು ಭದ್ರತಾ ಪಡೆಗಳ ಕಣ್ಗಾವಿಲನ ಶಾಂತಿ. ಯಾವ ರೀತಿಯಲ್ಲಾದರೂ ಕಾಶ್ಮೀರದ ಶಾಂತಿಯನ್ನು ಕದಡಲು ಪಾಕ್ ಪ್ರಯತ್ನಿಸುವುದು ನಿಶ್ಚಿತ. ವಿಧಿ ರದ್ದಾದ ಪರಿಣಾಮವಾಗಿ ಜನರು ದಂಗೆಯೆದ್ದು ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ವಿಶ್ವ ಸಮುದಾಯದ ಎದುರು ತೋರಿಸಕೊಡಲು ಅದು ಯಾವ ಹೀನ ಮಟ್ಟಕ್ಕೂ ಇಳಿಯಲು ಹೇಸುವುದಿಲ್ಲ. ಇದಕ್ಕೆ ಅವಕಾಶ ಸಿಗದಂತೆ ಮಾಡುವುದರಲ್ಲಿ ಭಾರತದ ಯಶಸ್ಸುವ ಅಡಗಿದೆ. ಯಾವ ಕಾರಣಕ್ಕೂ ಕಣಿವೆಯಲ್ಲಿ ಹಿಂಸಾಚಾರ ತಡೆಯದಂತೆ ನೋಡಿಕೊಳ್ಳುವುದು ಹಾಗೂ ಇದೇ ವೇಳೆ ದೈನಂದಿನ ಜನಜೀವನವನ್ನು ಯಥಾಸ್ಥಿತಿಗೆ ತರುವುದು ಈ ಎರಡು ವಿಚಾರವನ್ನು ಸಮರ್ಥವಾಗಿ ನಿಭಾಯಿಸಿದರೆ ಯುದ್ಧ ಗೆದ್ದಂತೆ.