Advertisement

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

01:10 AM Dec 23, 2024 | Team Udayavani |

ಹೊಸದಿಲ್ಲಿ: ಜಮ್ಮು-ಕಾಶ್ಮೀರದಲ್ಲಿ “ಚಿಲ್ಲಾಯಿ ಕಲಾನ್‌’ (ಕಠಿನ ಚಳಿಯನ್ನು ಹೊಂದಿರುವ 40 ದಿನಗಳ ಋತು) ಆರಂಭವಾಗಿದೆ. ಶನಿವಾರ ರಾತ್ರಿ 5 ದಶಕಗಳಿಗೆ ಹೋಲಿಕೆ ಮಾಡಿದರೆ ಡಿಸೆಂಬರ್‌ನಲ್ಲೇ ಅತೀ ಕಡಿಮೆ ತಾಪಮಾನದ ರಾತ್ರಿ ಎಂದು ದಾಖಲಾಗಿದೆ. ಶನಿವಾರ ರಾತ್ರಿ ಶ್ರೀನಗರದಲ್ಲಿ -8.5 ಡಿಗ್ರಿ ಸೆಲಿÏಯಸ್‌ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 1990ರಲ್ಲಿಯೂ ಇದೇ ರೀತಿಯ ತಾಪಮಾನ ದಾಖಲಾಗಿತ್ತು. 1934 ಡಿ.13ರಂದು ಮೈನಸ್‌ 12.8 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ದಾಲ್‌ ಸರೋವರ ಸೇರಿದಂತೆ ಹಲವೆಡೆ ನೀರು ಹೆಪ್ಪುಗಟ್ಟಿದೆ.

Advertisement

ಹೆಪ್ಪುಗಟ್ಟಿದ ನದಿ
ಇನ್ನು ಹಿಮಾಚಲ ಪ್ರದೇಶದಲ್ಲಿ ಕೂಡ ನಡುವ ಚಳಿ ಇದೆ. ಬಿಲಾಸ್‌ಪುರ್‌, ಉನಾ, ಹಮೀರ್‌ಪುರ್‌, ಮಂಡಿಯಲ್ಲಿ ತಾಪಮಾನ ಶೂನ್ಯಕ್ಕಿಂತ ಕಡಿಮೆ ಇದೆ. ಹಲವಾರು ನದಿಗಳ ಮತ್ತು ಪೈಪ್‌ಗ್ಳಲ್ಲಿನ ನೀರು ಹೆಪ್ಪುಗಟ್ಟಿದ ಪ್ರಕರಣಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next