Advertisement
ವಿಷ್ಣುಪಾದ ದೇವಾಲಯ ಅತ್ಯಂತ ಪ್ರಾಚೀನ ಹಿಂದು ದೇವಾಲಯವಾಗಿದ್ದ ಫಾಲ್ಗು ನದಿ ತೀರದಿಲ್ಲಿದೆ. ಅದೇ ರೀತಿ ಮಹಾಬೋಧಿ ದೇವಾಲಯ ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಎರಡು ದೇವಾಲಯಗಳನ್ನು ಕಾಶಿ ವಿಶ್ವನಾಥ ಕಾರಿಡಾರ್ ಮಾದರಿ ಅಭಿವೃದ್ಧಿಪಡಿಸಲಾಗುತ್ತದೆ.
ಅಭಿವೃದ್ಧಿಗೆ ಯೋಜನೆ
ಬಿಹಾರದ ರಾಜಗಿರ್, ಪ್ರಾಚೀನ ವಿಶ್ವವಿದ್ಯಾಲಯ ನಳಂದ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಯೋಜನೆ ಪ್ರಕಟಿಸಿದೆ. ರಾಜಗಿರ್ ಹಿಂದೂ, ಬೌದ್ಧ, ಜೈನರ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ 20ನೇ ತೀರ್ಥಂಕರ ಮುನಿಸುವ್ರತ ದೇಗುಲ ಮತ್ತು ಸಪ್ತರ್ಷಿ ಬ್ರಹ್ಮ ಕುಂಡ ಪುರಾತನವಾಗಿದೆ. ರಾಜಗಿರ್ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ನಳಂದ ವಿಶ್ವವಿದ್ಯಾಲಯದ ವೈಭವವನ್ನು ಪುನರ್ ಪ್ರತಿಷ್ಠಾಪಿಸುವ ಜತೆಗೆ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ಚಿಂತಿಸಿದೆ ಎಂದು ವಿತ್ತ ಸಚಿವೆ ತಿಳಿಸಿದರು. ಜತೆಗೆ ಒಡಿಶಾವನ್ನು ರಮಣೀಯ ಸುಂದರ ಮಂದಿರ, ಸ್ಮಾರಕಗಳು, ವನ್ಯಜೀವಿ ಅಭಯಾರಣ್ಯ ಮತ್ತು ಪ್ರಾಚೀನ ಕಡಲತೀರಗಳು ಪ್ರವಾಸೋದ್ಯಮ ತಾಣವನ್ನಾಗಿ ಮಾಡಿದೆ. ಒಡಿಶಾದ ಅಭಿವೃದ್ಧಿಗೂ ಕೇಂದ್ರ ಸರ್ಕಾರ ನೆರವು ನೀಡಲಿದೆ.