Advertisement

ಕಾಶ್ಮೀರಕ್ಕೆ ಶ್ರೀ ಕಾಶೀ ಮಠಾಧೀಶರ ಭೇಟಿ

01:54 AM Apr 05, 2021 | Team Udayavani |

ಮಂಗಳೂರು: ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮತ್‌ ಸಂಯಮೀಂದ್ರತೀರ್ಥ ಸ್ವಾಮೀಜಿ ಅವರು ಜಮ್ಮು-ಕಾಶ್ಮೀರಕ್ಕೆ ಐತಿಹಾಸಿಕ ಭೇಟಿ ನೀಡಿದರು.

Advertisement

ಕಾಶ್ಮೀರದ ಪುರಾತನ ದೇವಾಲಯ ಗಳಾದ ವೈಷ್ಣೋದೇವಿ, ಖೀರ್‌ ಭವಾನಿ ದೇವಸ್ಥಾನ, ಮಾರ್ತಾಂಡ ಸೂರ್ಯ ದೇವ ಸ್ಥಾನ, ಪಂಚಮುಖೀ ಹನುಮಂತ ದೇವ ಸ್ಥಾನ, ಅವಂತೀಪುರ ದೇವಸ್ಥಾನ, ತ್ರಿಪುರ ಸುಂದರಿ ದೇವಸ್ಥಾನ, ಶೈಲಪುತ್ರಿ ದೇವಸ್ಥಾನ, ಜಮ್ಮು ಶ್ರೀ ರಘುನಾಥ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಪ್ರಮುಖರ ಭೇಟಿ
ಸಾರಸ್ವತ ಸಮುದಾಯಕ್ಕೆ ಸೇರಿದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ ಸ್ವಾಮೀಜಿ, ಕಣಿವೆಯ ಪ್ರಮುಖರನ್ನು ಭೇಟಿಯಾಗಿ ಸಾರಸ್ವತ ಸಮಾಜದ ಪೂರ್ವಜರ ನೆಲೆಗಳ, ಇತಿಹಾಸದ ಕುರಿತು ತಿಳಿದುಕೊಂಡು, ಸ್ಥಳೀಯ ಪ್ರಮುಖರ ಜತೆ ಸಮಾಜದ ಸಾರಸ್ವತ ಸಮಾಜದ ಪ್ರಸ್ತುತ ಸ್ಥಿತಿಗತಿ, ಸವಾಲುಗಳು ಮತ್ತು ಅವರ ವಲಸೆಗೆ ಕಾರಣವಾದ ಅಂಶಗಳ ಕುರಿತು ಚರ್ಚಿಸಿದರು.

ಸಮಾಜದ ಸಂಘಟನೆಯಲ್ಲಿ ಶ್ರೀಗಳ ಈ ಚಾರಿತ್ರಿಕ ಭೇಟಿ ಪ್ರಮುಖವಾಗಿದ್ದು ಸಮಾಜಕ್ಕೆ ಹೊಸ ದಿಕ್ಸೂಚಿ ಮತ್ತು ಸಾರಸ್ವತ ಸಮಾಜದ ಜಮ್ಮು ಕಾಶ್ಮೀರದ ಸಾಂಸ್ಕೃತಿಕ ಪರಂಪರೆಯನ್ನು ಮರು ನಿರ್ಮಾಣ ಮಾಡುವಲ್ಲಿ ಮಹತ್ವದ್ದಾಗಿದೆ.

ಜಮ್ಮು ಕಾಶ್ಮೀರ ಗೌ ರಕ್ಷಾ ಸಮಿತಿ, ಅಮರ್‌ ರಾಜಪುತ್‌ ಸಭಾ, ಜಮ್ಮು ಕಾಶ್ಮೀರ ವಿಶ್ವ ಹಿಂದೂ ಪರಿಷತ್‌ ಕಾರ್ಯಕಾರಿ ಅಧ್ಯಕ್ಷ, ಜಮ್ಮು ಕಾಶ್ಮೀರ ಬ್ರಾಹ್ಮಣ ಸಭಾ, ಹಿಂದೂ ಜಾಗರಣ ಮಂಚ್‌, ಜಮ್ಮು ಕಾಶ್ಮೀರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಜಮ್ಮು ನಗರ ಪಾಲಿಕೆಯ ಮೇಯರ್‌, ಉಪ ಮೇಯರ್‌ ಹಾಗೂ ಜನಪ್ರತಿನಿಧಿಗಳು, ವೇದ ಮಂದಿರದ ಅಧ್ಯಕ್ಷ ಹಾಗೂ ಪದಾಧಿಕಾರಿಗಳು, ಜಮ್ಮು ರಾಷ್ಟ್ರೀಯ ಸೇವಿಕಾ ಸಮಿತಿ, ರಾಷ್ಟ್ರೀಯ ವೈದ್ಯಕೀಯ ಸಭಾ, ಆರ್ಯ ಪ್ರತಿನಿಧಿ ಸಭಾ, ಸನಾತನ ಧರ್ಮ ಸಭಾ, ಜಮ್ಮು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪದಾಧಿಕಾರಿಗಳು, ದಿಲ್ಲಿ, ಮುಂಬಯಿ, ಕರ್ನಾಟಕ, ಕೇರಳ ರಾಜ್ಯದ ಸಂಸ್ಥಾನದ ಅನುಯಾಯಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next