Advertisement

ಕಾಶೀಪೀಠಕ್ಕಿಲ್ಲ ಭೇದಭಾವ: ಕಾಶಿ ಶ್ರೀ 

06:55 AM Jan 16, 2018 | Team Udayavani |

ಶಿವಮೊಗ್ಗ: ಕೆಲವು ಪೀಠಗಳಲ್ಲಿ ಕಾಣುವ ಗುರು ವಿರಕ್ತ ಎಂಬ ಭೇದ-ಭಾವವನ್ನು ಕಾಶಿಪೀಠ ಎಂದಿಗೂ ಮಾಡಿಲ್ಲ ಎಂದು ಉತ್ತರ ಪ್ರದೇಶದ ವಾರಣಾಸಿ (ಕಾಶಿ) ಜಂಗಮವಾಡಿ ಮಠದ ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ನಗರದ ಜೆ.ಎಚ್‌. ಪಟೇಲ್‌ ಬಡವಾಣೆಯಲ್ಲಿ ಶಿವಮೊಗ್ಗ ಜಿಲ್ಲಾ ವೀರಶೈವ ಜಂಗಮ ಅರ್ಚಕರ ಹಾಗೂ ಪುರೋಹಿತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಿರ್ಮಾಣಗೊಂಡಿರುವ ಅರ್ಚಕರ ಹಾಗೂ ಪುರೋಹಿತರ ನೂತನ ಗುರುಕುಲ ಕಟ್ಟಡ ಉದ್ಘಾಟಿಸಿ ಹಾಗೂ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. 

ವೀರಶೈವ ಸಮುದಾಯದಲ್ಲಿ ಗುರು-ವಿರಕ್ತರೆಂಬ ಸೈದಾಟಛಿಂತಿಕ ವಿಭಾಗಗಳಿವೆ. ಆದರೆ ಕಾಶಿಪೀಠದಲ್ಲಿ ಎರಡೂ ಪರಂಪರೆಯ ಪೀಠಾಧೀಶರು ವಿದ್ಯೆ ಕಲಿತು ಹೋಗಿದ್ದಾರೆ. ರಂಭಾಪುರಿ, ಉಜ್ಜಯಿನಿ,ಕೇದಾರ, ಶ್ರೀಶೈಲ ಸೇರಿ ಹಲವಾರು ಪೀಠಗಳ ಜಗದ್ಗುರುಗಳು, ಪ್ರಮುಖ ವಿರಕ್ತ ಪರಂಪರೆ ಜಗದ್ಗುರುಗಳು, ವಿವಿಧ ಮಠಾಧೀಶರು ಅಭ್ಯಾಸ ಮಾಡಿದ್ದಾರೆ. ಅಂತಹ ಮಠಾಧೀಶರಿಂದ ಕರ್ನಾಟಕದ ಧಾರ್ಮಿಕ ಇತಿಹಾಸ ಶ್ರೀಮಂತಗೊಂಡಿದ್ದು, ಅದಕ್ಕೆ ಕಾಶಿಪೀಠವೇ ಭದ್ರ ಬುನಾದಿಯಾಗಿದೆ. ಉತ್ತರದ ತುದಿಯಲ್ಲಿರುವ ಕಾಶಿಪೀಠ ಕರ್ನಾಟಕದಲ್ಲೂ ನಿರಂತರ ಜ್ಞಾನ ಪ್ರಸಾರದ ಕಾರ್ಯ ನಡೆಸುತ್ತಿದೆ ಎಂದರು.

ಕಾಶಿ ಪೀಠದಲ್ಲಿ ವಿದ್ಯೆ ಕಲಿತ ಮಠಾಧೀಶರೆಲ್ಲರೂ ಪೀಠದ ಬಗ್ಗೆ ಇಂದಿಗೂ ಗೌರವಾದರ ಹೊಂದಿದ್ದಾರೆ. ಆದರೆ ಕೆಲವರು ಪಂಚಪೀಠ ಮತ್ತು ವಿರಕ್ತ ಪೀಠಗಳ ನಡುವೆ ಕಂದಕ ಸೃಷ್ಟಿಸಲು ಹುನ್ನಾರ ನಡೆಸುತ್ತಿದ್ದಾರೆ.

ಅಂತಹವರ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ ಎಂದು ಕರೆ ನೀಡಿದರು. ಪ್ರತಿಯೊಬ್ಬರೂ “ಸಿದ್ದಾಂತ ಶಿಖಾಮಣಿ’ ಧರ್ಮ ಗ್ರಂಥವನ್ನು ಕನಿಷ್ಠ 5 ಜನರಿಗೆ ಕೊಡುಗೆಯಾಗಿ ನೀಡುವಂತೆ ಆಗಬೇಕು. ಧರ್ಮ ಗ್ರಂಥ ಮನೆಯಲ್ಲಿದ್ದರೆ ಆಚಾರ್ಯರೇ ಜೀವಂತ ಇದ್ದಾರೆಂಬ ಭಾವ ಮೂಡುತ್ತದೆ. ದಶಧರ್ಮ ಸೂತ್ರ ಪಾಲನೆಯಿಂದ ಶಾಂತಿ, ಸುಖ,ಸಮೃದ್ಧಿ 
ಪ್ರಾಪ್ತಿಯಾಗಲಿದೆ ಎಂದರು.

Advertisement

ಬೆಕ್ಕಿನಕಲ್ಮಠ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಹಲಗೂರು ಬೃಹನ್ಮಠದ ರುದ್ರಮುನಿ
ಶಿವಾಚಾರ್ಯ ಸ್ವಾಮೀಜಿ, ಮಾಜಿ ಸಂಸದ ಆಯನೂರು ಮಂಜುನಾಥ್‌, ಶಾಸಕ ಬಿ.ವೈ. ರಾಘವೇಂದ್ರ, ನಾಗರಾಜಶಾಸ್ತ್ರಿ , ಮಲ್ಲಿಕಾರ್ಜುನಯ್ಯ ಶಾಸ್ತ್ರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next