Advertisement

ರೈಲಲ್ಲಿ ಶಿವನಿಗೆ ಸೀಟು ‘ತಾತ್ಕಾಲಿಕ’!: ಐಆರ್‌ಸಿಟಿಸಿ ಸ್ಪಷ್ಟನೆ

09:49 AM Feb 18, 2020 | Hari Prasad |

ಹೊಸದಿಲ್ಲಿ: ಪ್ರಧಾನಿ ಮೋದಿ ರವಿವಾರ ವಷ್ಟೇ ಹಸಿರು ನಿಶಾನೆ ತೋರಿದ ಕಾಶಿ ಮಹಾಕಾಲ್‌ ಎಕ್ಸ್‌ಪ್ರೆಸ್‌ನಲ್ಲಿ 64ನೇ ಸೀಟು “ಭಗವಂತ ಶಿವ’ನಿಗೆ ಮೀಸಲು ಎಂಬ ಸುದ್ದಿಗೆ ಸಂಬಂಧಿಸಿ, ಭಾರತೀಯ ರೈಲ್ವೆ ಕೆಟರಿಂಗ್‌ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಸೋಮವಾರ ಸ್ಪಷ್ಟನೆ ನೀಡಿದೆ.

Advertisement

ಹೊಸ ಯೋಜನೆಗೆ ಯಶಸ್ಸು ಸಿಗಲಿ ಎಂಬ ಕಾರಣಕ್ಕಾಗಿ ಸಿಬಂದಿಯು ರೈಲಿನ 64ನೇ ಬರ್ತ್‌ ನಲ್ಲಿ ಶಿವನ ಫೋಟೋ ಇಟ್ಟು, ಅಲಂಕಾರ ಮಾಡಿ ಪೂಜಿಸಿದ್ದರು. ಅದು ತಾತ್ಕಾಲಿಕವಷ್ಟೇ, ಅಲ್ಲಿ ಕಾಯಂ ಆಗಿ ಶಿವನ ಫೋಟೋ ಇರುವುದಿಲ್ಲ ಎಂದು ಐಆರ್‌ಸಿಟಿಸಿ ಹೇಳಿದೆ.

ಶಿವನಿಗಾಗಿಯೇ ಒಂದು ಸೀಟು ಮೀಸಲಿಡಲಾಗಿದೆ ಎಂಬ ಸುದ್ದಿಯ ಕುರಿತು ಆಕ್ಷೇಪಗಳು ಬಂದ ಬೆನ್ನಲ್ಲೇ ಈ ಸ್ಪಷ್ಟನೆ ನೀಡಲಾಗಿದೆ.
ಇದಕ್ಕೂ ಮುನ್ನ, ಎಐಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ ಅವರು, ದೇಶದ ಸಂವಿಧಾನದ ಪೀಠಿಕೆಯ ಫೋಟೋವನ್ನು ಪ್ರಧಾನಿ ಕಾರ್ಯಾಲಯಕ್ಕೆ ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next