Advertisement

ಪ್ರಧಾನಿ ಮೋದಿ ಭೇಟಿ ಮಾಡಿದ ಕಾಶಿ ಜಗದ್ಗುರು

10:26 PM Nov 26, 2019 | Lakshmi GovindaRaj |

ಹುಬ್ಬಳ್ಳಿ: ಕಾಶಿ ಜಗದ್ಗುರು ಡಾ| ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಲ್ಲಿಯ ಅವರ ಕಚೇರಿಯಲ್ಲಿ ಭೇಟಿ ಮಾಡಿ ಮುಂಬರುವ ಜನವರಿ-ಫೆಬ್ರವರಿಯಲ್ಲಿ ಕಾಶಿಯಲ್ಲಿ ನಡೆಯಲಿರುವ ಜಗದ್ಗುರು ವಿಶ್ವಾರಾಧ್ಯ ಗುರುಕುಲ ಶತಮಾನೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಿದರು. ಈ ಸಂದರ್ಭ ಪಂಚಪೀಠಗಳ ಪರಂಪರೆ ಮತ್ತು ಕಾಶಿಪೀಠದ ಇತಿಹಾಸ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥ ಕುರಿತು ವಿವರಿಸಿದರು.

Advertisement

ಮೋದಿ ಅವರು ಪೀಠ ಪರಂಪರೆಯನ್ನು ಭಕ್ತಿ-ಶ್ರದ್ಧೆಯಿಂದ ಆಲಿಸಿ ಸಮಾರಂಭಕ್ಕೆ ಆಗಮಿಸಿ “ಶ್ರೀ ಸಿದ್ಧಾಂತ ಶಿಖಾಮಣಿ ಆ್ಯಪ್‌’ ಲೋಕಾರ್ಪಣೆ ಮಾಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಕಾಶಿ ಜಗದ್ಗುರುಗಳು ಶ್ರೀ ಸಿದ್ಧಾಂತ ಶಿಖಾಮಣಿಯ ಗುಜರಾತಿ ಗ್ರಂಥ ಹಾಗೂ ವಿಶೇಷ ರುದ್ರಾಕ್ಷಿ ಮಾಲೆಯನ್ನು ಮೋದಿಯವರಿಗೆ ನೀಡಿ ಆಶೀರ್ವದಿಸಿದರು. ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸುರೇಶ ಅಂಗಡಿ, ಸೊಲ್ಲಾಪುರದ ಸಂಸದರಾದ ಶ್ರೀ ಜಯಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next