Advertisement

“ಕಾಸರಗೋಡು’ಚಿತ್ರೀಕರಣಗೊಂಡ ಶಾಲೆಯಲ್ಲೀಗ 85 ಮಕ್ಕಳು

11:13 PM Sep 15, 2019 | Team Udayavani |

ಉಳ್ಳಾಲ: “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ’ ಚಲನಚಿತ್ರ ಚಿತ್ರೀಕರಣಗೊಂಡಿದ್ದ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ದುಗ್ಗಜ್ಜರಕಟ್ಟೆಯ ಖಾಸಗಿ ಅನುದಾನಿತ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ವಿದ್ಯೋದಯ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟನೆ ಭಾನುವಾರ ನಡೆಯಿತು.

Advertisement

ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ಚಲನಚಿತ್ರ ನಿರ್ದೇಶಕ ರಿಷಬ್‌ ಶೆಟ್ಟಿ, ಶಾಲೆಗೆ ಶೌಚಾಲಯ, ಸುಸಜ್ಜಿತ ಆಟದ ಮೈದಾನ, ಪೀಠೊಪಕರಣ, ಕಂಪ್ಯೂಟರ್‌ ತರಗತಿ ಆರಂಭಿಸುವ ಯೋಜನೆಯಿದೆ. 17 ಮಕ್ಕಳಿದ್ದ ಶಾಲೆಯಲ್ಲಿ ಈಗ 85 ವಿದ್ಯಾರ್ಥಿಗಳಿದ್ದಾರೆ. ಶಾಲೆಯನ್ನು ಸೂಪರ್‌ ಸಕ್ಸಸ್‌ ಮಾಡಬೇಕು. ಇದಕ್ಕೆ ಊರಿನ ಜನತೆಯ ಆಶೀರ್ವಾದ, ಸಹಕಾರ ಅತ್ಯಗತ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next