ವರು. ಇಬ್ಬರಿಗೆ ಕೊರೊನಾ ಬಾಧಿತರ ಸಂಪರ್ಕದಿಂದ ರೋಗ ಹರಡಿದೆ.
Advertisement
ಕೇರಳದಲ್ಲಿ ಒಟ್ಟು 394 ಮಂದಿಗೆ ರೋಗ ಬಾಧಿಸಿದ್ದು, 245 ಮಂದಿ ಗುಣ ಮುಖರಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 147 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಕಾಸರಗೋಡಿನ 24 ಸಹಿತ ಒಟ್ಟು 27 ಮಂದಿ ರೋಗ ಮುಕ್ತರಾಗಿದ್ದಾರೆ. ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ 5 ಮಂದಿ, ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 16 ಮಂದಿ, ಕಾಂಞಂಗಾಡ್ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 3 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. ಎರ್ನಾಕುಳಂ, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಯಲ್ಲಿ ತಲಾ ಒಬ್ಬರು ಗುಣಮುಖರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಈ ತನಕ 168 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 107 ಮಂದಿ ಗುಣಮುಖರಾಗಿದ್ದು, 61 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯ ಚೆಮ್ನಾಡ್ ನಿವಾಸಿ, 20ರ ಹರೆಯದ ಯುವಕನಿಗೆ ಸೋಂಕು ಖಚಿತ ಗೊಂಡಿದೆ. ಮಾ. 19ರಂದು ದುಬಾೖಯಿಂದ ಬಂದಿದ್ದು, ಮನೆಯಲ್ಲಿ ನಿಗಾದಲ್ಲಿದ್ದರು. ಅವರನ್ನು ಚಿಕಿತ್ಸೆಗಾಗಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್ ತಿಳಿಸಿದರು. ಕೋಟ್ಟಯಂ ಸರಕಾರಿ ಮೆಡಿಕಲ್ ಕಾಲೇಜಿನ ಅರವಳಿಕೆ ವಿಭಾಗ ಮುಖ್ಯಸ್ಥ ಡಾ| ಯು. ಮುರಳೀ ಕೃಷ್ಣನ್ ಅವರ ನೇತೃತ್ವದ 25 ಮಂದಿಯ ತಂಡ ಗುರುವಾರ ಉಕ್ಕಿನಡ್ಕದ ಕಾಸರಗೋಡು ಸರಕಾರಿ ಮೆಡಿಕಲ್ ಕಾಲೇಜಿಗೆ ಆಗಮಿಸಿದೆ. ಡಾ| ಎಸ್.ಎಲ್. ಸಂತೋಷ್ ಅವರ ನೇತೃತ್ವದ 26 ಮಂದಿಯ ತಂಡ ಸೇವಾವಧಿ ಪೂರೈಸಿದ್ದು, ತಿರುವನಂತಪುರಕ್ಕೆ ಮರಳಲಿದೆ. 73 ಕೇಸು ದಾಖಲು
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 73 ಕೇಸುಗಳನ್ನು ದಾಖಲಿಸಲಾಗಿದೆ. 58 ಮಂದಿಯನ್ನು ಬಂಧಿಸಿ, 15 ವಾಹನಗಳನ್ನು ವಶಪಡಿಸಲಾಗಿದೆ. ತಲಪ್ಪಾಡಿಯಲ್ಲಿ ಅಕ್ರಮ ಪ್ರವೇಶ ಮೂಲಕ ಲಾಕ್‌ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ 4 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸರಕಾರಿ ನಿಗಾ ವಿಭಾಗವಿರುವ ಶಾಲೆಯೊಂದರ ಕ್ವಾರೆಂಟೈನ್‌ನಲ್ಲಿ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದರು.
Related Articles
ಕಾಸರಗೋಡು : ಕೋವಿಡ್ 19 ಸೋಂಕು ಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಹೋದರರು ಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಬೋವಿಕ್ಕಾನದ ಆಲೂರು ನಿವಾಸಿಗಳಾದ ಈ ಇಬ್ಬರೂ ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸಕ್ಕಿದ್ದರು. ಈ ಪೈಕಿ ಓರ್ವರು ಮಾ. 17ರಂದು ಊರಿಗೆ ಮರಳಿದ್ದರು. ತಪಾಸಣೆಯಲ್ಲಿ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ಖಚಿತಗೊಂಡಿತ್ತು. ಆರಂಭದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಗೆ, ಅನಂತರ ಪೆರಿಯ ಪಿ.ಎಚ್.ಸಿ.ಯ ನಿಗಾ ವಾರ್ಡಿಗೆ ದಾಖಲಿಸಲಾಗಿತ್ತು. ಮನೆಯ ಸದಸ್ಯರಿಗೂ ಕಾಂಞಂಗಾಡಿನ ಮನೆಯಲ್ಲಿ ನಿಗಾದಲ್ಲಿ ಇರಿಸಲಾಗಿತ್ತು. ಕೆಲವು ದಿನಗಳ ಬಳಿಕ ನಡೆಸಿದ ತಪಾಸಣೆಯಲ್ಲಿ ಮತ್ತೋರ್ವ ಸಹೋದರನಿಗೂ ಸೋಂಕು ತಗುಲಿರುವುದು ಖಚಿತವಾಗಿತ್ತು. ಈಗ ಇಬ್ಬರೂ ಗುಣಮುಖರಾಗಿದ್ದಾರೆ. ಓರ್ವರು ಎ. 13ರಂದು, ಇನ್ನೋರ್ವರು ಎ. 14ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯ ವೈದ್ಯರು, ದಾದಿಯರು ಹಾಗೂ ಸಿಬಂದಿ ಅತ್ಯಂತ ಕಾಳಜಿಯಿಂದ ಶುಶ್ರೂಷೆ ಒದಗಿಸಿದ್ದಾರೆ ಒಂದು ಈ ಸಹೋದರರು ಕೃತಜ್ಞತೆ ಸಲ್ಲಿಸಿದ್ದಾರೆ.
Advertisement