Advertisement

ಕಾಸರಗೋಡು: 323 ಮಂದಿಗೆ ಲಸಿಕೆ

02:39 AM Jan 17, 2021 | Team Udayavani |

ಕಾಸರಗೋಡು: ಜಿಲ್ಲೆಯ 9 ಕೇಂದ್ರಗಳಲ್ಲಿ ಶನಿವಾರ ಕೋವಿಡ್ ವೈರಸ್‌ ವಿರುದ್ಧ ಲಸಿಕೆ ವಿತರಣೆ ಆರಂಭಗೊಂಡಿತು. ಮೊದಲ ದಿನ 323 ಮಂದಿ ಲಸಿಕೆ ಹಾಕಿಸಿಕೊಂಡರು.

Advertisement

ಕಾಸರಗೋಡು ಜನರಲ್‌ ಆಸ್ಪತ್ರೆ, ಉಕ್ಕಿನಡ್ಕ  ಮೆಡಿಕಲ್‌ ಕಾಲೇಜು, ಕಾಂಞಂಗಾಡ್‌ ಜಿಲ್ಲಾ ಆಸ್ಪತ್ರೆ, ಮಂಗಲ್ಪಾಡಿ, ಬೇಡಡ್ಕ, ನೀಲೇಶ್ವರ, ಪನತ್ತಡಿ ತಾಲೂಕು ಆಸ್ಪತ್ರೆಗಳು, ಪೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಪ್ರಾಥಮಿಕ ಹಂತದ ಕೋವಿಡ್‌ ವಾಕ್ಸಿನೇಶನ್‌ ನಡೆಸಲಾಯಿತು.

ದ್ವಿತೀಯ ಹಂತದ ಲಸಿಕೆ ನೀಡಿಕೆಗೆ ಈ 9 ಕೇಂದ್ರಗಳ ಸಹಿತ ಜಿಲ್ಲೆಯ 58 ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಮೂರನೇ ಹಂತದಲ್ಲಿ ಜಿಲ್ಲೆಯಲ್ಲಿ 329 ಕೇಂದ್ರಗಳನ್ನು ಆರಿಸಲಾಗಿದೆ. ಪ್ರತಿ ಕೇಂದ್ರದಲ್ಲೂ 4 ವಾಕ್ಸಿನೇಶನ್‌ ಅಧಿಕಾರಿಗಳೂ, 3 ವಾಕ್ಸಿನೇಟರ್‌ಗಳೂ ಇದ್ದರು. ಜತೆಗೆ ಎರಡು ಪಾಳಿಗಳಲ್ಲಿ ಇಬ್ಬರು ವೈದ್ಯರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next