Advertisement

ಕಾಸರಗೋಡು: ಹತ್ತು ಮಂದಿಗೆ ಸೋಂಕು ದೃಢ

11:15 AM Jun 12, 2020 | mahesh |

ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 10 ಮಂದಿಗೆ ಕೋವಿಡ್ ದೃಢವಾಗಿದೆ. 8 ಮಂದಿ ಮಹಾರಾಷ್ಟ್ರದಿಂದ, ಇಬ್ಬರು ವಿದೇಶದಿಂದ ಬಂದವರು. ಇದೇ ವೇಳೆ 6 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಕಾಸರಗೋಡು ಜಿಲ್ಲೆಯ 104 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಂಬಳೆ ಪಂಚಾಯತ್‌ ವ್ಯಾಪ್ತಿಯ ಒಂದೇ ಕುಟುಂಬದ ಮೂವರು, ಮಂಗಲ್ಪಾಡಿಯ ಇಬ್ಬರು, ಉದುಮ, ಪೈವಳಿಕೆ, ವಲಿಯಪರಂಬ ಪಂಚಾಯತ್‌ ವ್ಯಾಪ್ತಿಯ ತಲಾ ಓರ್ವ ವ್ಯಕ್ತಿಗಳು ಮಹಾರಾಷ್ಟ್ರದಿಂದ ಬಂದು ಸೋಂಕು ಬಾಧಿತರಾದವರು. ಕುಂಬಳೆ ಪಂಚಾಯತ್‌ ವ್ಯಾಪ್ತಿಯ ವ್ಯಕ್ತಿ ಕುವೈಟ್‌ನಿಂದ ಬಂದಿದ್ದರೆ, ಕೋಡೋಂ-ಬೇಳೂರು ನಿವಾಸಿ ಸೌದಿ ಅರೇಬಿಯಾದಿಂದ ಬಂದವರು.

Advertisement

ಕೇರಳದಲ್ಲಿ 83 ಮಂದಿಗೆ ಸೋಂಕು
ಕೇರಳದಲ್ಲಿ ಗುರುವಾರ 83 ಮಂದಿಯಲ್ಲಿ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 62 ಮಂದಿ ಗುಣಮುಖರಾಗಿದ್ದಾರೆ. ಕಣ್ಣೂರು ಇರಿಟ್ಟಿ ನಿವಾಸಿ ಸಾವಿಗೀಡಾಗಿದ್ದಾರೆ.

208 ಮಂದಿಯ ವಿರುದ್ಧ ಪ್ರಕರಣ
ಜಿಲ್ಲೆಯಲ್ಲಿ ಗುರುವಾರ ಮಾಸ್ಕ್ ಧರಿಸದ 204 ಮಂದಿಯ ವಿರುದ್ಧ, ಲಾಕ್‌ಡೌನ್‌ ಉಲ್ಲಂಘಿಸಿದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಐವರನ್ನು ಬಂಧಿಸಲಾಗಿದೆ. ಗಡಿನಾಡ ವಿದ್ಯಾರ್ಥಿಗಳಲ್ಲಿ ಆತಂಕ ಬೇಡ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಬರೆಯಲಿರುವ ಕಾಸರಗೋಡಿನ ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಬೇಡ. ಅಗತ್ಯವಾದ ಎಲ್ಲ ನೆರವನ್ನು ಒದಗಿಸುವ ಭರವಸೆಯನ್ನು ದ.ಕ. ಜಿಲ್ಲೆಯ ಬಿಜೆಪಿ ಶಾಸಕರು ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್‌ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಅನುಮತಿ ಹಾಗೂ ಪರೀಕ್ಷಾ ಕೇಂದ್ರಗಳಿಗೆ ತಲುಪಲು ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next