Advertisement
ಎಷ್ಟೋ ವರ್ಷಗಳಿಂದ ದಸ್ತಾ ವೇಜು ಬರಹಗಾರರು ದಾಖಲೆ ಗಳನ್ನು ಕನ್ನಡದಲ್ಲೇ ಬರೆದು ಸಲ್ಲಿಸು ತ್ತಿದ್ದರು. ಆದು ಸ್ವೀಕೃತವೂ ಆಗುತ್ತಿತ್ತು. ಕಾಸರಗೋಡಿನಲ್ಲಿ ಕನ್ನಡದ ಯಾವುದೇ ದಾಖಲೆ, ಅರ್ಜಿಗಳನ್ನು ಸ್ವೀಕರಿಸಿ ಕನ್ನಡದಲ್ಲೇ ಉತ್ತರಿಸ ಬೇಕೆಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‌ವೀರ್ ಚಂದ್ ಇತ್ತೀಚೆಗೆ ಮತ್ತೆ ಆದೇಶ ನೀಡಿದ್ದರು. ಈಗ ಅವರ ಆದೇಶವನ್ನೇ ಧಿಕ್ಕರಿಸಿ ನೋಂದಣಿ ಅಧಿಕಾರಿ ದಾಷ್ಟ್ಯಾ ಮೆರೆದಿದ್ದಾರೆ.ಕನ್ನಡಿಗ ದಸ್ತಾವೇಜು ಬರಹಗಾರರಿಗೆ “ನೀವು ಆಂಗ್ಲ ಭಾಷೆಯಲ್ಲಿ ದಸ್ತಾವೇಜು ದಾಖಲೆಗಳನ್ನು ಬರೆದು ಸಲ್ಲಿಸಿದರೆ ಮಾತ್ರವೇ ಸ್ವೀಕ ರಿಸಲಾಗುವುದು’ ಎನ್ನುತ್ತಿದ್ದಾರೆ. ಜಿಲ್ಲೆಯಲ್ಲಿ 40 ವರ್ಷಕ್ಕೂ ಹೆಚ್ಚು ಕಾಲದಿಂದ ದಸ್ತಾವೇಜು ಬರೆಯುತ್ತಿದ್ದ ಕನ್ನಡಿಗರಿದ್ದು, ಈ ಸೂಚನೆಯಿಂದ ಸಂಕಷ್ಟಕ್ಕಿಡಾಗಿದ್ದಾರೆ.
1956ರಲ್ಲಿ ರಾಜ್ಯ ಪುನರ್ ವಿಂಗಡಣೆ ಅನಂತರ ಕಾಸರಗೋಡು ಭಾಷಾ ಅಲ್ಪಸಂಖ್ಯಾಕ ಪ್ರದೇಶ ಆಗಿದೆ. ಜಿಲ್ಲೆಯ ಕನ್ನಡಿಗರ ನಿರಂತರ ಹೋರಾಟದ ಫಲವಾಗಿ ಕೇರಳ ಸರಕಾರ ಭಾಷಾ ಅಲ್ಪಸಂಖ್ಯಾಕರಿಗೆ ಸಂವಿಧಾನಬದ್ಧ ಸವಲತ್ತು, ಹಕ್ಕುಗಳನ್ನು ನೀಡಿದೆ. ಆದರೆ ಕಾಸರಗೋಡಿಗೆ ಬರುವ ಇತರ ಜಿಲ್ಲೆಗಳ ಅಧಿಕಾರಿಗಳು ಕನ್ನಡಿಗರ ಹಕ್ಕುಗಳನ್ನು ಕಸಿಯುತ್ತಲೇ ಇದ್ದಾರೆ.