ಕಾಸರಗೋಡು: ಪೈವಳಿಕೆಯ 7 ತಿಂಗಳ ಮಗು ಮತ್ತು ಕಾಸರಗೋಡು ನಗರಸಭಾ ವ್ಯಾಪ್ತಿಯ 71 ವರ್ಷ ಪ್ರಾಯದ ವೃದ್ಧ ಕೋವಿಡ್ ನಿಂದ ರವಿವಾರ ಸಾವಿಗೀಡಾಗಿದ್ದಾರೆ. ಇದೇ ವೇಳೆ ಜಿಲ್ಲೆಯಲ್ಲಿ 48 ಮಂದಿಗೆ ಪಾಸಿಟಿವ್ ಕೋವಿಡ್ ವರದಿಯಾಗಿದೆ.
ನಗರಸಭಾ ವ್ಯಾಪ್ತಿಯ ವೃದ್ಧನನ್ನು ಆ. 10ರಂದು ಎದೆ ನೋವಿನ ಹಿನ್ನೆಲೆಯಲ್ಲಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತಪಾಸಣೆಯಲ್ಲಿ ಕೋವಿಡ್ ದೃಢವಾದ ಹಿನ್ನೆಲೆಯಲ್ಲಿ ಪರಿಯಾರಂ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ರವಿವಾರ ಬೆಳಗ್ಗೆ ಸಾವಿಗೀಡಾದರು. ಪೈವಳಿಯ ಮಗುವಿಗೆ ಸಂಪರ್ಕದ ಮೂಲಕ ಕೋವಿಡ್ ತಗಲಿದ್ದು, ಪರಿಯಾರಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಬಾಧಿತ 48 ಮಂದಿಗೆಯ ಪೈಕಿ 38 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗಲಿದೆ. ಇಬ್ಬರ ಸಂಪರ್ಕದ ಮೂಲ ಪತ್ತೆಯಾಗಿಲ್ಲ. ನಾಲ್ವರು ವಿದೇಶದಿಂದ, 6 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 203 ಮಂದಿ ಗುಣಮುಖರಾಗಿದ್ದಾರೆ.
ಕಾಂಞಂಗಾಡ್ 12, ಪಳ್ಳಿಕ್ಕರೆ 8, ಚೆಮ್ನಾಡ್ 5, ಕಾಸರಗೋಡು 4, ಕುಂಬಳೆ, ಮಂಗಲ್ಪಾಡಿ, ತ್ರಿಕರಿಪುರ, ಪನತ್ತಡಿ, ಚೆರುವತ್ತೂರುಗಳಲ್ಲಿ ತಲಾ 2, ಮಧೂರು, ಚೆಂಗಳ, ಪೈವಳಿಕೆ, ಎಣ್ಮಕಜೆ ಮಡಿಕೈ, ಅಜಾನೂರು, ಕಿನಾನೂರು ಕರಿಂದಳಂ, ಕಯ್ಯೂರು ಚೀಮೇನಿ, ಕಳ್ಳಾರ್‌ಗಳಲ್ಲಿ ತಲಾ 1 ಪ್ರಕರಣ ವರದಿಯಾಗಿದೆ.
ಕೇರಳದಲ್ಲಿ 1,530 ಪ್ರಕರಣ
ರವಿವಾರ ಕೇರಳದಲ್ಲಿ 1,530 ಮಂದಿಗೆ ಸೋಂಕು ದೃಢವಾಗಿದೆ. ರಾಜ್ಯದಲ್ಲಿ ರವಿವಾರ 10 ಸಾವು ಸಂಭವಿಸಿದೆ. ಈ ವರೆಗೆ ಸಾವಿಗೀಡಾದವರ ಸಂಖ್ಯೆ 156.