ಕಾಸರಗೋಡು: ಕೊಂಕಣಿ ಭಾಷೆ, ಸಂಸ್ಕೃತಿ ಕೊಂಕಣಿಗರ ಉಸಿರಾಗ ಬೇಕಲ್ಲದೆ ಅದನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಮತ್ತಷ್ಟು ಕೆಲಸ ವಾಗಬೇಕಾಗಿದೆ. ಧಾರ್ಮಿಕವಾಗಿ ಸಾಕಷ್ಟು ಗಟ್ಟಿಯಾಗಿ ರುವ ಕೊಂಕಣಿಗರು ಸಾಹಿತ್ತಿಕ ವಾಗಿ, ಸಾಂಸ್ಕೃತಿಕವಾಗಿ ಮತ್ತಷ್ಟು ಸಕ್ರಿಯವಾಗಬೇಕಾಗಿರೋ ಅನಿವಾರ್ಯತೆ ಯಿದೆ ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ರಾಜ್ಯಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ತಿಳಿಸಿದರು.
ಅವರು ಕುಮಟದ ಚಿತ್ರಗಿಯಲ್ಲಿರುವ ದಯಾನಂದ ಆರ್. ಪ್ರಭು ಅವರ ನಿವಾಸದಲ್ಲಿ ಜರಗಿದ “ಘರ್ ಘರ್ ಕೊಂಕಣಿ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮನೆ ಮನೆಗಳಲ್ಲಿ ಕೊಂಕಣಿ ಭಾಷೆಯ ಕುರಿತು ಜಾಗೃತಿ ಮೂಡಿಸುವ ಈ ವಿಶಿಷ್ಟ ಕಾರ್ಯಕ್ರಮ ಜನಮನ ಮೆಚ್ಚುಗೆ ಗಳಿಸಿದೆಯಲ್ಲದೆ ಎಲ್ಲಾ ವರ್ಗದ ಜನರಿಗೆ ಉತ್ತೇಜನ ನೀಡಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀನಿಧಿ ಅವರಿಂದ ಭರತನಾಟ್ಯ, ಪ್ರಥಮ್ ಪೈ ಹಾಗೂ ವಿಶಾಲ್ ಬಾಳಿಗಾ ಅವರಿಂದ ಭಕ್ತಿ, ಭಾವಗೀತೆಗಳು, ಕೊಂಕಣಿ ವೋ ವೋ ಹಾಡುಗಳನ್ನು ಸೀತಾ ಆರ್. ಶ್ಯಾನುಭೋಗ್ ಹಾಡಿ ರಂಜಿಸಿದರು.
ಶ್ರೀನಿಧಿ ಆರ್. ಭಟ್ ಪ್ರಾರ್ಥನೆ ಹಾಡಿದರು. ನೇಹಾ ಎಸ್. ಪ್ರಭು ಸ್ವಾಗತಿಸಿದರು. ಘರ್ ಘರ್ ಕೊಂಕಣಿಯ ರೂವಾರಿ ಕಾಸರಗೋಡು ಚಿನ್ನಾ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೊಂಕಣಿ ಅಕಾಡೆಮಿಯ ಮಾಜಿ ಸದಸ್ಯ ಚಿದಾನಂದ ಭಂಡಾರಿ, ಸುಹಾಸ್ ರಾವ್, ರಂಗನಟ ಸಂತೋಷ್ ಶೆಣೈ ಉಪಸ್ಥಿತರಿದ್ದರು. ಮನೆಯ ಒಡತಿ ರುಕಾ¾ ಬಾಯಿ ಅವರು ಕೊಂಕಣಿ ನೀತಿ ಕಥೆಗಳನ್ನು ರಸವತ್ತಾಗಿ ಹೇಳಿದರು. ನಿರ್ಮಲಾ ಡಿ.ಪ್ರಭು ಅವರು ಅತಿಥಿ ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಅನೂಪ್ ಆರ್.ಪ್ರಭು ವಂದಿಸಿದರು.