Advertisement
ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಾಸರಗೋಡು ಜಿಲ್ಲೆಯ ರಾವಣೇಶ್ವರದ 67ರ ವ್ಯಕ್ತಿ ಮೃತ ಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರ ಸಂಖ್ಯೆ 3ಕ್ಕೇರಿತು. ಕೇರಳದಲ್ಲಿ 1,078, ಪ್ರಕರಣ; 6 ಸಾವು ಕೇರಳದಲ್ಲಿ ಗುರುವಾರ 1,078 ಮಂದಿಗೆ ಸೋಂಕು ದೃಢವಾಗಿದೆ. 798 ಮಂದಿಗೆ ಸಂಪರ್ಕದಿಂದ ತಗಲಿದೆ. 104 ಮಂದಿ ವಿದೇಶದಿಂದಲೂ 115 ಮಂದಿ ಇತರ ರಾಜ್ಯಗಳಿಂದಲೂ ಬಂದವರು. ರಾವಣೇಶ್ವರ ನಿವಾಸಿ ಸಹಿತ ರಾಜ್ಯದಲ್ಲಿ 6 ಮಂದಿ ಸಾವಿಗೀಡಾಗಿದ್ದಾರೆ.
ಲಾಕ್‌ಡೌನ್ ಉಲ್ಲಂಘಿಸಿದ ಆರೋಪ ದಲ್ಲಿ ಜಿಲ್ಲೆಯಲ್ಲಿ ಗುರುವಾರ 12 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 12 ಮಂದಿಯನ್ನು ಬಂಧಿಸಿ 3 ವಾಹನ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾಸ್ಕ್ ಧರಿಸದ 192 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕ್ವಾರಂಟೈನ್ ಉಲ್ಲಂಘನೆ
ಜು. 18ರಂದು ಶಿವಮೊಗ್ಗದಿಂದ ಊರಿಗೆ ಆಗಮಿಸಿದ್ದ ತೆಕ್ಕಿಲ್ ನಿವಾಸಿ ಸಾಲಿ ಅವರು ಹೋಂ ಕ್ವಾರಂಟೈನ್ ಉಲ್ಲಂ ಸಿ ಮನೆಯಿಂದ ಹೊರಗಡೆ ತೆರಳಿದ ಕಾರಣ ಪೊಲೀಸರು ಸಾಂಸ್ಥಿಕ ನಿಗಾಕ್ಕೊಪಿಸಿದ್ದಾರೆ.
Related Articles
ಕುಂಬಳೆ: ಕೊರೊನಾ ಬಾಧಿತರ ಸಂಖ್ಯೆ ಹೆಚ್ಚುತ್ತಿರುವ ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜು. 24ರಿಂದ 15 ದಿನಗಳ ಕಾಲ ಲಾಕ್‌ಡೌನ್ ಮಾಡಲು ಗ್ರಾ.ಪಂ. ಆಡಳಿತ ಸಮಿತಿ ತೀರ್ಮಾನಿಸಿದೆ. 23ನೇ ವಾರ್ಡಿನ ಅಂಗಡಿ ಮುಂಗಟ್ಟುಗಳೆಲ್ಲವೂ ಮುಚ್ಚಲಿವೆ. ಉಳಿದೆಡೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಇರುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಲಾಗುವುದು ಎಂದು ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅವರು ತಿಳಿಸಿದ್ದಾರೆ.
Advertisement