Advertisement

ಕಾಸರಗೋಡು: ಶನಿವಾರ 4 ಮಂದಿಗೆ ಸೋಂಕು

10:29 AM May 24, 2020 | sudhir |

ಕಾಸರಗೋಡು: ಜಿಲ್ಲೆಯಲ್ಲಿ ನಾಲ್ವರ ಸಹಿತ ಕೇರಳ ರಾಜ್ಯದಲ್ಲಿ ಶನಿವಾರ ಒಂದೇ ದಿನ 62 ಕೋವಿಡ್ ಪ್ರಕರಣಗಳು ದೃಢಗೊಂಡಿವೆೆ. ಕೇರಳದಲ್ಲಿ ಒಂದೇ ದಿನ ಇಷ್ಟು ಸಂಖ್ಯೆಯಲ್ಲಿ ಸೋಂಕು ದೃಢಗೊಂಡಿದ್ದು ಇದೇ ಮೊದಲ ಸಲವಾಗಿದೆ. ಶುಕ್ರವಾರ 42 ಮಂದಿಗೆ ಸೋಂಕು ದೃಢಗೊಂಡಿತ್ತು.

Advertisement

ಈ ಪೈಕಿ 18 ಮಂದಿ ವಿದೇಶದಿಂದ ಮತ್ತು 31 ಮಂದಿ ಇತರ ರಾಜ್ಯಗಳಿಂದ ಹಾಗೂ 13 ಮಂದಿಗೆ ಸಂಪರ್ಕ ದಿಂದ ಸೋಂಕು ಬಂದಿದೆ. ಇದೇ ವೇಳೆ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಗುಣಮುಖರಾಗಿದ್ದಾರೆ.

4 ಮಂದಿಗೆ ಸೋಂಕು
ಜಿಲ್ಲೆಯಲ್ಲಿ ಶನಿವಾರ 4 ಮಂದಿಗೆ ಸೋಂಕು ಖಚಿತ ಗೊಂಡಿದ್ದು ಒಬ್ಬರು ರೋಗದಿಂದ ಗುಣಮುಖ ರಾಗಿದ್ದು. ಒಟ್ಟು 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

686 ಮಂದಿ ಕೇರಳ ಪ್ರವೇಶ
ಮಂಜೇಶ್ವರ ಚೆಕ್‌ಪೋಸ್ಟ್‌ ಮೂಲಕ ಶನಿವಾರ 686 ಮಂದಿ ಕೇರಳ ಪ್ರವೇಶ ಮಾಡಿದ್ದಾರೆ. ಈ ವರೆಗೆ ಒಟ್ಟು 17,490 ಮಂದಿ ಕೇರಳಕ್ಕೆ ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next