- ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ಮೂವರಿಗೆ ಕೋವಿಡ್ ಸೋಂಕು ಖಚಿತವಾಗಿದೆ. 4 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯ ಒಬ್ಬ ಮಹಿಳಾ ವೈದ್ಯೆಯೂ ಸಹಿತ ಮೂವರಿಗೆ ರೋಗ ಬಾಧಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್ ತಿಳಿಸಿದರು. ಬಹ್ರೇನ್‌ನಿಂದ ಆಗಮಿಸಿದ್ದ ಕಾಂಞಂಗಾಡ್ ನಗರಸಭೆ ವ್ಯಾಪ್ತಿಯ ನಿವಾಸ್ತಿ, ಮಹಾರಾಷ್ಟ್ರದಿಂದ ಆಗಮಿಸಿದ್ದ ಚೆರುವತ್ತೂರು ಗ್ರಾ.ಪಂ. ನಿವಾಸಿ, 34 ವರ್ಷ ಪ್ರಾಯದ ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯೆಗೆ ಸೋಂಕು ಖಚಿತವಾಗಿದೆ. ವೈದ್ಯೆಗೆ ಸಂಪರ್ಕದಿಂದ ರೋಗ ತಗಲಿದೆ.
Advertisement
ಕಾಸರಗೋಡು: 3 ಪ್ರಕರಣ
11:04 AM Jun 04, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.