Advertisement

ಕಾಸರಗೋಡು: 12 ಮಂದಿಗೆ ಸೋಂಕು

10:19 AM Jun 05, 2020 | mahesh |

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 12 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಇವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. 6 ಮಂದಿ ಮಹಾರಾಷ್ಟ್ರದಿಂದ, 5 ಮಂದಿ ವಿದೇಶದಿಂದ ಆಗಮಿಸಿದವರು. ಒಬ್ಬರಿಗೆ ಸಂಪರ್ಕದಿಂದ ರೋಗ ತಗಲಿದೆ. ಈಗ ಜಿಲ್ಲೆಯಲ್ಲಿ 109 ಮಂದಿ ಕೊರೊನಾ ಸೋಂಕು ಖಚಿತಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಮಹಾರಾಷ್ಟ್ರದಿಂದ ಆಗಮಿಸಿದ 50 ವರ್ಷ ಪ್ರಾಯದ ಮಂಗಲ್ಪಾಡಿ ಗ್ರಾ.ಪಂ. ನಿವಾಸಿ, ಅವರ 16 ವರ್ಷ ಪ್ರಾಯದ ಪುತ್ರಿ, 21 ವರ್ಷ ಪ್ರಾಯದ ಮಹಿಳೆ, 44 ವರ್ಷ ಪ್ರಾಯದ ಪಡನ್ನ ಗ್ರಾ.ಪಂ. ನಿವಾಸಿ, 42 ವರ್ಷ ಪ್ರಾಯದ ಚೆಂಗಳ ಗ್ರಾ.ಪಂ. ನಿವಾಸಿ, 48 ವರ್ಷ ಪ್ರಾಯದ ವಲಿಯಪರಂಬದ ನಿವಾಸಿ ರೋಗ ಬಾಧಿತರು.

ಕುವೈಟ್‌ನಿಂದ ಆಗಮಿಸಿದ 34 ವರ್ಷ ಪ್ರಾಯದ ನೀಲೇಶ್ವರ ನಗರಸಭೆ ವ್ಯಾಪ್ತಿಯ ನಿವಾಸಿ, 24 ವರ್ಷ ಪ್ರಾಯದ ಪುಲ್ಲೂರು-ಪೆರಿಯ ಗ್ರಾ.ಪಂ. ನಿವಾಸಿ, 25 ವರ್ಷ ಪ್ರಾಯದ ಅಜಾನೂರು ನಿವಾಸಿ, ದುಬಾೖಯಿಂದ ಆಗಮಿಸಿದ 21 ವರ್ಷ ಪ್ರಾಯದ ಚೆಮ್ನಾಡ್‌ ಗ್ರಾ.ಪಂ.ನ ಮಹಿಳೆ, ಶಾರ್ಜಾದಿಂದ ಆಗಮಿಸಿದ 48 ವರ್ಷ ಪ್ರಾಯದ ಉದುಮ ಪಂ. ನಿವಾಸಿ ಸೋಂಕು ಬಾಧಿತರು. 25 ವರ್ಷ ಪ್ರಾಯದ ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿಗೆ ಸಂಪರ್ಕದಿಂದ ಸೋಂಕು ಖಚಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next