ಕಾಸರಗೋಡು: ಮುಂಬರುವ ಶಾಲಾ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳು ಬೇಸಗೆ ರಜೆಗಾಗಿ ಶಾಲೆಗಳು ಮುಚ್ಚಿಕೊಳ್ಳುವ ಮುನ್ನವೇ ಜಿಲ್ಲಾ ಕೇಂದ್ರಕ್ಕೆ ಬಂದು ತಲುಪಿವೆ.
9 ಮತ್ತು 10ನೇ ತರಗತಿಗಳಿಗೆ ಕನ್ನಡ, ಮಲಯಾಳ ಮತ್ತು ಇಂಗ್ಲಿಷ್‌ನಲ್ಲಿ ಸಂಪೂರ್ಣ ಪುಸ್ತಕಗಳು ಮತ್ತು 1ರಿಂದ 5ನೇ ತರಗತಿಗಳಿಗೆ ಕೆಲವು ಸೇರಿದಂತೆ 3,90,281 ಪುಸ್ತಕಗಳು ಜಿಲ್ಲಾ ಕೇಂದ್ರ ವಾಗಿರುವ ಕಾಸರಗೋಡು ಸರಕಾರಿ ಪ್ರೌಢಶಾಲೆಯನ್ನು ತಲುಪಿವೆ.
ಕಾಸರಗೋಡು ಸರಕಾರಿ ಹೈಸ್ಕೂಲ್ ಡಿಸ್ಟ್ರಿಕ್ಟ್ ಹಬ್‌ನಲ್ಲಿ ಇನ್ನು ಮುಂದೆ ಪುಸ್ತಕಗಳನ್ನು ಇಳಿಸಲು ಅಗತ್ಯ ಸ್ಥಳಾವಕಾಶ ಇಲ್ಲದಿರುವುದರಿಂದ ಹೆಚ್ಚುವರಿ ಕೊಠಡಿಗಳ ಅಗತ್ಯವಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜ ರಾಗುತ್ತಿರುವುದರಿಂದ ಕೊಠಡಿಗಳ ಸಮಸ್ಯೆ ಎದುರಾಗಿದೆ. ಪರೀಕ್ಷೆಗಳು ಮುಗಿದ ಅನಂತರ ಉಳಿದ ಪುಸ್ತಕಗಳನ್ನು ರವಾನಿಸಲಾಗುವುದು ಎಂದು ಪಠ್ಯಪುಸ್ತಕ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 592 ಶಾಲೆಗಳಿ ಗಾಗಿ 137 ಸೊಸೈಟಿಗಳು ಕಾರ್ಯಾಚರಿಸುತ್ತಿವೆ. ಈಗಾಗಲೇ ಕಾಸರಗೋಡು ಕೇಂದ್ರಕ್ಕೆ ಪೂರೈಕೆಯಾ ಗಿರುವ ಪುಸ್ತಕಗಳಲ್ಲಿ ಚಿತ್ತಾರಿಕಲ್ ಉಪಜಿಲ್ಲಾ ಶಾಲೆಗಳಿಗೆ ರವಾನಿಸ ಲಿರುವ ಪುಸ್ತಕಗಳ ವಿಂಗಡಣೆ ಆರಂಭಗೊಂಡಿದೆ.
ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಪುಸ್ತಕಗಳನ್ನು ವಿತರಿಸ ಲಾಗುತ್ತದೆ. ಒಂದು ಸೊಸೈಟಿಯು ತನ್ನ ವ್ಯಾಪ್ತಿಯಲ್ಲಿ 5 ಶಾಲೆಗಳನ್ನು ಹೊಂದಿದ್ದು, 9 ಮತ್ತು 10ನೇ ತರಗತಿಯ ಪುಸ್ತಕಗಳನ್ನು ಮುಂದಿನ ತಿಂಗಳು ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.