Advertisement

ವಿಧಾನಸಭೆ ಚುನಾವಣೆ ಹಿನ್ನೆಲೆ : ಆಯೋಗದಿಂದ ನೀತಿ ಸಂಹಿತೆ ಜಾರಿ

07:29 PM Mar 15, 2021 | Team Udayavani |

ಕಾಸರಗೋಡು : ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕರಿಗೆ ಚುನಾವಣಾ ಆಯೋಗ ಕೆಲವೊಂದು ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ.

Advertisement

ಅದರಂತೆ ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಪ್ರಕಾರ ಜಾತಿ-ಮತ ಭಾವನೆಗಳನ್ನು ಕೆರಳಿಸಿ ಮತಯಾಚನೆ ನಡೆಸಕೂಡದು ಎಂದು ಸೂಚನೆಗಳನ್ನು ನೀಡಲಾಗಿದೆ.

– ಆರಾಧನಾಲಯಗಳನ್ನು ಚುನಾವಣೆ ಪ್ರಚಾರಕ್ಕಿರುವ ವೇದಿಕೆಯಾಗಿಸಬಾರದು. ಜನಾಂಗಗಳು, ಜಾತಿ, ಭಾಷೆ ಹೀಗೆ ವಿವಿಧ ವಿಚಾರಗಳಲ್ಲಿ ಜನತೆಯ ನಡುವೆ ಬಿರುಕು ಸೃಷ್ಟಿಸಿ, ಸಂಘರ್ಷ ತಲೆದೋರುವಂತೆ ರಾಜಕೀಯ ಪಕ್ಷಗಳು ಯಾ ಅಭ್ಯರ್ಥಿಗಳು ವರ್ತಿಸಕೂಡದು.

– ಇತರ ರಾಜಕೀಯ ಪಕ್ಷಗಳ ಕುರಿತು ಟೀಕೆ ನಡೆಸುವುದು ಕೇವಲ ಆ ಪಕ್ಷದ ನೀತಿ ಮತ್ತು ಕಾರ್ಯಕ್ರಮಗಳ ಬಗ್ಗೆ ಸೀಮಿತವಾಗಿರಬೇಕು. ಪ್ರತಿಪಕ್ಷದ ನೇತಾರರ ಯಾ ಕಾರ್ಯಕರ್ತರ ವ್ಯಕ್ತಿಗತ ವಿಚಾರಗಳ ಟೀಕೆಯಾಗಿರಕೂಡದು.

– ಖಚಿತಗೊಳ್ಳದ, ಕಪೋಲಕಲ್ಪಿತ ಆರೋಪಗಳನ್ನು ಪ್ರತಿಪಕ್ಷದ ನೇತಾರರ, ಕಾರ್ಯಕರ್ತರ ಮೇಲೆ ನಡೆಸಕೂಡದು.

Advertisement

– ಖಾಸಗಿ ವ್ಯಕ್ತಿಗಳ ಜಾಗ, ಕಟ್ಟಡ ಆವರಣ ಗೋಡೆಗಳಲ್ಲಿ ಮಾಲಿಕರ ಅನುಮತಿಯಿಲ್ಲದೆ ಬ್ಯಾನರ್‌, ನೋಟೀಸು ಇತ್ಯಾದಿ ಲಗತ್ತಿಸಕೂಡದು.

– ಮತದಾತರಿಗೆ ಲಂಚ, ಬೆದರಿಕೆ ಒಡ್ಡುವಿಕೆ, ಒಬ್ಬರ ಬದಲು ಇನ್ನೊಬ್ಬ ಮತದಾನ ನಡೆಸುವುದು ಇತ್ಯಾದಿಗಳನ್ನು ನಡೆಸಕೂಡದು.

– ವ್ಯಕ್ತಿಯೊಬ್ಬರ ರಾಜಕೀಯ ಅಭಿಮತಗಳು, ಚಟುವಟಿಕೆಗಳು ಹೇಗಿದ್ದರೂ, ಅವರ ಕೌಟುಂಬಿಕ ಬದುಕಿಗೆ ಧಕ್ಕೆಯಾಗದಂತೆ ಹಕ್ಕು ಪಾಲನೆಯಾಗಬೇಕು.

– ಇತರ ರಾಜಕೀಯ ಪಕ್ಷಗಳು ನಡೆಸುವ ಸಾರ್ವಜನಿಕ ಸಭೆಗಳು, ಮೆರವಣಿಗೆ ಇತ್ಯಾದಿಗಳಿಗೆ ತಡೆಯುಂಟುಮಾಡದಂತೆ ಪ್ರತಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಗಮನಿಸಬೇಕು.

– ರಾಜಕೀಯ ಪಕ್ಷವೊಂದು ಲಗತ್ತಿಸಿದ ಭಿತ್ತಿಪತ್ರವನ್ನು ಮತ್ತೊಂದು ಪಕ್ಷದ ಕಾರ್ಯಕರ್ತರು ತೆರವುಗೊಳಿಸಕೂಡದು.

Advertisement

Udayavani is now on Telegram. Click here to join our channel and stay updated with the latest news.

Next