Advertisement
15 ಮಂದಿ ಗುಣಮುಖಶುಕ್ರವಾರ ರಾಜ್ಯದಲ್ಲಿ ಗುಣಮುಖರಾಗಿರುವ ಒಟ್ಟು 15 ಮಂದಿ ಪೈಕಿ ಕಾಸರ ಗೋಡು-5, ಪತ್ತನಂತಿಟ್ಟ, ಮಲಪ್ಪುರಂ ಮತ್ತು ಕಣ್ಣೂರು ಜಿಲ್ಲೆಯಲ್ಲಿ ತಲಾ ಮೂವರು, ಕೊಲ್ಲಂ ಜಿಲ್ಲೆಯ ಒಬ್ಬರು ಸೇರಿದ್ದಾರೆ. ಈ ವರೆಗೆ 450 ಮಂದಿಗೆ ಸೋಂಕು ತಗಲಿದ್ದು, ವಿವಿಧ ಆಸ್ಪತ್ರೆಗಳಲ್ಲಿ 116 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೊಗ್ರಾಲ್ ಪುತ್ತೂರು, ಚೆಂಗಳ, ಚೆಮ್ನಾಡ್, ಮಧೂರು, ಮುಳಿಯಾರು, ಕುಂಬಳೆ ಗ್ರಾಮ ಪಂಚಾಯತ್‌ಗಳು ಮತ್ತು ಕಾಸರಗೋಡು, ಕಾಂಞಂಗಾಡ್ ನಗರಸಭೆಗಳು ಜಿಲ್ಲೆಯ ಹಾಟ್‌ಸ್ಪಾಟ್‌ಗಳಾಗಿದ್ದು, ಲಾಕ್‌ಡೌನ್ ನಿಬಂಧನೆಗಳನ್ನು ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ತಿಳಿಸಿದ್ದಾರೆ. 73 ಕೇಸು ದಾಖಲು
ನಿಯಮ ಉಲ್ಲಂಘನೆ ಸಂಬಂಧ ಜಿಲ್ಲೆ ಯಲ್ಲಿ 73 ಪ್ರಕರಣಗಳನ್ನು ದಾಖಲಿ ಲಾಗಿದೆ. 84 ಮಂದಿಯನ್ನು ಬಂಧಿಸಲಾಗಿದ್ದು, 27 ವಾಹನಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 1,693 ಪ್ರಕರಣ ದಾಖಲಿಸಿ 1,999 ಮಂದಿಯನ್ನು ಬಂಧಿಸ ಲಾಗಿದೆ; 676 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
Related Articles
ಸೋಂಕು ಬಾಧಿಸಿದ ಮಂಜೇರಿ ಪಯ್ಯನಾಡಿನ ದಂಪತಿ ನಾಲ್ಕು ತಿಂಗಳ ಮಗು ಶುಕ್ರವಾರ ಬೆಳಗ್ಗೆ ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸಾವಿಗೀಡಾಗಿದೆ. ಈ ಮಗುವಿಗೆ ಹೃದಯದ ಸಮಸ್ಯೆಯಿದ್ದು ಎ. 21ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಮಗುವಿಗೆ ಕೋವಿಡ್ ಸೋಂಕು ದೃಢವಾಗಿತ್ತು. ವೈದ್ಯರು ಶಕ್ತಿಮೀರಿ ಶ್ರಮಿಸಿದರೂ ಶಿಶುವಿನ ರಕ್ಷಣೆ ಸಾಧ್ಯವಾಗಲಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದರೊಂದಿಗೆ ಕೇರಳದಲ್ಲಿ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ ಮೂರಕ್ಕೇರಿತು.
Advertisement
175 ಜಿಲ್ಲೆಯಲ್ಲಿ ಒಟ್ಟು ಸೋಂಕಿತರು157 ಗುಣಮುಖರಾದವರು
18 ಚಿಕಿತ್ಸೆ ಪಡೆಯುತ್ತಿರುವವರು
05 ಶುಕ್ರವಾರ ಜಿಲ್ಲೆಯಲ್ಲಿ ಗುಣಮುಖರಾದವರು
15 ಶುಕ್ರವಾರ ರಾಜ್ಯದಲ್ಲಿ ಗುಣಮುಖರಾದವರು