ಕಾಸರಗೋಡು: ಪಾರ್ತಿಸುಬ್ಬನಿಂದ ಪ್ರಾರಂಭಗೊಂಡ ಆರಾಧನಾ ಕಲೆಯಾದ ಯಕ್ಷಗಾನ ವನ್ನು ಉಳಿಸಿ ಬೆಳೆಸುವಲ್ಲಿ ಕಾಸರಗೋಡಿನ ಕೊಡುಗೆ ಅಪಾರ ವಾದುದು. ಕರ್ನಾಟಕದಲ್ಲಿ ಸಾಧ್ಯ ವಾಗದ್ದನ್ನು ಕಾಸರಗೋಡಿನ ಮಣ್ಣಿನಲ್ಲಿ ಸಾಧಿಸಿ ರುವುದು ಅಭಿನಂದನೀಯ. ಯಕ್ಷಗಾನ ಬೆಳೆಯಲು ಕಲಾವಿದರು ಶ್ರದ್ಧೆಯಿಂದ ದುಡಿಯಬೇಕು. ಜತೆಯಲ್ಲಿ ಕಲಾ ಭಿಮಾನಿಗಳ ಪ್ರೋತ್ಸಾಹವೂ ಅಷ್ಟೇ ಮುಖ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗೆಡೆ ಹೇಳಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃ ತಿಕ ಪ್ರತಿಷ್ಠಾನವು ಸಿರಿಬಾಗಿಲಿನಲ್ಲಿ ನಿರ್ಮಿಸಿ ರುವ “ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ’ವನ್ನು ಮಂಗಳವಾರ ಲೋಕಾರ್ಪಣೆಗೈದು ಅವರು ಮಾತನಾಡಿದರು.
ಯಕ್ಷಗಾನವನ್ನು ಸಂರಕ್ಷಣೆ ಮಾಡಿದ ಕೀರ್ತಿ ಗಡಿನಾಡು ಕಾಸರಗೋಡಿಗೆ ಸೇರಿದೆ. ರಾಮಕೃಷ್ಣ ಮಯ್ಯ ಅವರ ನೇತೃತ್ವದಲ್ಲಿ ಈ ಭವ್ಯ ಭವನ ನಿರ್ಮಾಣವಾಗಿದ್ದು, ಯಕ್ಷಗಾನಕ್ಕೆ ಇದು ದೊಡ್ಡ ಕೊಡುಗೆಯಾಗಲಿದೆ. ಎಡನೀರು ಮಠ ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಯಕ್ಷಗಾನವನ್ನು ಉಳಿಸಿ ಬೆಳೆಸುವಲ್ಲಿ ಅದರ ಪಾತ್ರ ಮಹತ್ತರವಾದುದು ಎಂದರು.
ಯಕ್ಷದರ್ಶಿನಿಯನ್ನು ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಿದರು. ಉದ್ಯಮಿ ಕೆ.ಕೆ. ಶೆಟ್ಟಿ ಗ್ರಂಥಾಲಯಕ್ಕೆ ಚಾಲನೆ ನೀಡಿದರು.
“ಮರೆಯಲಾರದ ಮಹಾನುಭಾವರು’ ಪುಸ್ತಕಗಳನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಹಾಗೂ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ಉಪಸ್ಥಿತರಿದ್ದರು. ಸಂಚಾಲಕ ಡಾ| ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಸ್ವಾಗತಿಸಿದರು. ಭಾಗವತ ರಾಮಕೃಷ್ಣ ಮಯ್ಯ ಪ್ರಸ್ತಾವನೆಗೈದರು. ಶ್ರುತಕೀರ್ತಿ ರಾಜ್ ವಂದಿಸಿದರು.