ಕಾಸರಗೋಡು: 2019 ಜೂನ್ 25 ರಂದು ರಾತ್ರಿ 10.15 ಕ್ಕೆ ಮಧೂರು ಚೆಟ್ಟುಂಗುಳಿಯಲ್ಲಿ ಹೈದರ್ ಅವರಿಗೆ ಹಲ್ಲೆ ಮಾಡುತ್ತಿದ್ದಾಗ ಅದನ್ನು ತಡೆಯಲೆತ್ನಿಸಿದ ಅಬ್ದುಲ್ ಅಸೀಸ್ ಮತ್ತು ಅಮೀರ್ ಅವರಿಗೆ ಹಲ್ಲೆ ಮಾಡಿ ಚಾಕುವಿನಿಂದ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಧೂರು ಚೆಟ್ಟುಂಗುಳಿಯ ಮೊಹಮ್ಮದ್ ಗುಲ್ ಫಾನ್(32), ಮಧೂರು ಪಾರೆಕಟ್ಟೆಯ ಸಿನಾನ್ ಪಿ.ಎ(33), ಕಾಸರಗೋಡು ಅಣಂಗೂರು ಟಿಪ್ಪುನಗರ ಪಳ್ಳಿಕ್ಕಾಲ್‌ನ ಕೈಸಲ್ ಕೆ.ಎಂ(33), ಮತ್ತು ಅಣಂಗೂರು ಟ.ವಿ.ಸ್ಟೇಶನ್ ರಸ್ತೆಯ ಮುಹಮ್ಮದ್ ಸಫಾನ್(33)ನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ)ಒಟ್ಟು ಎಂಟು ವರ್ಷ ಸಜೆ ಹಾಗು 30 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ನಾಲ್ಕು ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ.
ಕೋಳಿ ಅಂಗಡಿಯಲ್ಲಿ ಕಾಡು ಹಂದಿ ಮಾಂಸ : ಇಬ್ಬರ ಸೆರೆ
ಕಾಸರಗೋಡು: ಕೋಳಿ ಮಾರಾಟದ ಅಂಗಡಿಯಲ್ಲಿ ಕಾಡು ಹಂದಿ ಮಾಂಸದ ಪದಾರ್ಥ ತಯಾರಿಸುತ್ತಿದ್ದ ಚೆರುವತ್ತೂರು ಕೊವ್ವಲ್ ಪುದಿಯಕಂಡಂ ರಸ್ತೆ ಬಳಿಯ ಚಿಕ್ಕನ್ ಸ್ಟಾಲ್ ಮಾಲಕ ರಾಮನ್‌ಚಿರ ನಿವಾಸಿ ಕೆ.ಸುರೇಶನ್(45) ಮತ್ತು ಆತನ ಸ್ನೇಹಿತ ವಡಕುಂಬಾಡಿನ ಎ.ರಂಜಿತ್ ಕುಮಾರ್(43) ನನ್ನು ಅರಣ್ಯ ಇಲಾಖೆಯ ತಂಡ ಬಂಧಿಸಿದೆ.
ಕಾಡು ಹಂದಿ ಪದಾರ್ಥ ತಯಾರಿಸುವ ಬಗ್ಗೆ ರಹಸ್ಯ ಮಾಹಿತಿ ಲಭಿಸಿದ್ದು, ಅದರಂತೆ ದಾಳಿ ಮಾಡಲಾಗಿತ್ತು. ಇವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.