Advertisement

Kasaragod; ಲಾರಿ ಮಗುಚಿ ಬಿದ್ದು ಚಾಲಕ ಸಾವು

11:52 PM Jan 26, 2024 | Team Udayavani |

ಕಾಸರಗೋಡು: ಬೋರ್‌ವೆಲ್‌ ಲಾರಿ ಪಿಕಪ್‌ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದು ಚಾಲಕ ಸಾವಿಗೀಡಾದ ಘಟನೆ ಕುಟ್ಟಿಕ್ಕೋಲ್‌ನಲ್ಲಿ ನಡೆದಿದೆ.

Advertisement

ಲಾರಿ ಚಾಲಕ, ಕೊಟ್ಟೋಡಿ ಕಳ್ಳಾರ್‌ ಒರಳ ಕುನ್ನೇಲ್‌ ನಿವಾಸಿ ಜೋಸೆಫ್‌ ಅವರ ಪುತ್ರ ಜೀಜೋ ಜೋಸೆಫ್‌ (29) ಸಾವಿಗೀಡಾದವರು. ಬೋರ್‌ವೆಲ್‌ ಲಾರಿಯಲ್ಲಿದ್ದ ಮೂವರು ಗಾಯಗೊಂಡಿದ್ದು, ಇವರಲ್ಲೋರ್ವ ಗಂಭೀರ ಗಾಯಗೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ 9 ಗಂಟೆಗೆ ಕುಟ್ಟಿಕ್ಕೋಲ್‌ ಅತ್ತಿಯಡ್ಕದ ಕಳಕರದಲ್ಲಿ ಅಪಘಾತ ಸಂಭವಿಸಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next