Advertisement
ಯುವತಿ ನಾಪತ್ತೆಕುಂಬಳೆ: ಉಳುವಾರು ನಿವಾಸಿ ಮೊದೀನ್ ಅವರ ಪುತ್ರಿ ನಸ್ರೀನ(19) ನಾಪತ್ತೆಯಾಗಿರುವುದಾಗಿ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಡಿ.13 ರಂದು ರಾತ್ರಿಯಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಮೊಬೈಲ್ ಫೋನ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು.
ಕುಂಬಳೆ: ಆಟೋ ಚಾಲಕ ಕೊಯಿಪಾಡಿ ಕುಂಟಂಗೇರಡ್ಕದ ಸತೀಶ(52) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಕೊಯಿಪ್ಪಾಡಿ ವಿಲೇಜ್‌ನ ಫಾರೂಕ್‌ಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಮಹಿಳೆಯರೊಂದಿಗೆ ಅನುಚಿತ ವರ್ತನೆ: ವಾಚ್‌ಮೆನ್ ಸೆರೆ
ಉಪ್ಪಳ: ರಾತ್ರಿ ಹೊತ್ತು ಟಾಯ್ಲೆಟ್‌ಗೆ ಹೋಗುವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಉಪ್ಪಳದ ಖಾಸಗಿ ಆಸ್ಪತ್ರೆಯ ವಾಚ್‌ಮೆನ್ ಬೇಕೂರು ಅಗರ್ತಿಮೂಲೆಯ ರಾಜೇಶ್(45)ನನ್ನು ರೋಗಿಗಳು ಹಾಗೂ ಸ್ಥಳೀಯರು ಸೇರಿ ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಯಾರೂ ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರು ಈತನ ವಿರುದ್ಧ ಕೇಸು ದಾಖಲಿಸಿ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಡಿ.16 ರಂದು ರಾತ್ರಿ 9.30 ಕ್ಕೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಆರೋಪಿಸಲಾಗಿದೆ.