Advertisement
ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನ ಕೃಷಿ ಅಧಿಕಾರಿ ಮಧು ಜಾರ್ಜ್ ಮತ್ತಾಯಿ ಅವರ ನೇತೃತ್ವದಲ್ಲಿ ಜಿಲ್ಲೆಯ ಕೃಷಿ ಭವನಗಳ ಮುಖಾಂತರ ತೀವ್ರ ಯಜ್ಞ ಕಾರ್ಯಕ್ರಮ ನಡೆಸಲಾಗಿತ್ತು. ಈ ಮೂಲಕ ಜಿಲ್ಲೆಯಲ್ಲಿ ಕೃಷಿಯನ್ನೇ ಆಶ್ರಯಿಸಿ ಬದುಕುವ ಎಲ್ಲ ಮಂದಿಗೂ ಬೆಳೆಗಳನ್ನು ಯಥಾ ಸಮಯದಲ್ಲಿ ಆರ್ಥಿಕ ಸಹಾಯ ಮತ್ತು ವಿಮೆ ನಡೆಸಲು ಸಾಧ್ಯವಾಗಿದೆ.
Related Articles
Advertisement
ವಿಮೆ ಸದಸ್ಯತ್ವಕ್ಕೆ ಸ್ವಂತವಾಗಿ, ಲೀಸ್‌ಗೆ ಜಾಗ ಪಡೆದು ಕೃಷಿ ನಡೆಸುವವರು ಅರ್ಹರಾಗಿದ್ದಾರೆ. ಭತ್ತದ ಕೃಷಿಯಲ್ಲಿ ಪ್ರತಿ ಕೃಷಿಕನೂ ಬೆಳೆ ವಿಮೆ ನಡೆಸಬೇಕು. ಆದರೆ ಸಾಮೂಹಿಕವಾಗಿ ಕೃಷಿ ನಡೆಸುವ ಗದ್ದೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವ ಸಮಿತಿಗಳ ಕಾರ್ಯದರ್ಶಿ ಯಾ ಅಧ್ಯಕ್ಷ ಹೆಸರಲ್ಲಿ, ಗುಂಪು ಹಿನ್ನೆಲೆಯಲ್ಲಿ ಸದಸ್ಯತನ ಪಡೆಯಬಹುದು. ನೋಂದಣಿ ನಡೆಸಿದ ಗದ್ದೆಗಳಲ್ಲಿ ಒಬ್ಬರ ಗದ್ದೆಯಲ್ಲಿ ನಷ್ಟ ಸಂಭವಿಸಿದರೂ ಪರಿಹಾರ ಲಭಿಸಲಿದೆ.
ಕೃಷಿಭವನ ಸಂಪರ್ಕಿಸಿಯೋಜನೆ ಪಂಚಾಯತ್ ಮಟ್ಟದಲ್ಲಿ ವಿವಿಧ ಕೃಷಿ ಭವನಗಳಲ್ಲಿ ಕೃಷಿಕರಿಗೆ ವಿಮೆ ಯೋಜನೆಯಲ್ಲಿ ಸದಸ್ಯತನ ಪಡೆಯುವ ಸೌಲಭ್ಯ ಏರ್ಪಡಿಸಲಾಗಿದೆ. ಕೃಷಿ ಸಿಬಂದಿ ಜಾಗ ಸಂದರ್ಶನ ನಡೆಸಿ ಪ್ರೀಮಿಯಂ ಮೊಬಲಗು ಪರಿಶೀಲನೆ ನಡೆಸುವರು. ಈ ಮೊಬಲಗು ಯೋಜನೆಗಾಗಿ ನೇಮಿಸಿದ ಏಜೆಂಟ್ ಮೂಲಕ ಯಾ ನೇರವಾಗಿ ಸಮೀಪದ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಯಾ ಸಹಕಾರಿ ಬ್ಯಾಂಕ್‌ನಲ್ಲಿ ಪಾವತಿಸಬಹುದು. ಯೋಜನೆಯನ್ನು ಗರಿಷ್ಠ ಮಟ್ಟದಲ್ಲಿ ಕೃಷಿಕರಿಗೆ ತಲಪಿಸುವ ಮಟ್ಟಿಗೆ ಕೃಷಿ ಅಧಿಕಾರಿ ಸಿಬಂದಿಗೆ ಸಾರ್ವಜನಿಕ ಮಾನದಂಡಗಳಿಗೆ ಅನುಗುಣವಾಗಿ ಏಜೆಂಟರನ್ನು ನೇಮಿಸುವರು. ಕೃಷಿಕರಿಗೆ, ಏಜೆಂಟರಿಗೆ ಪ್ರೀಮಿಯಂ ಪಾವತಿಸಿ ಕೃಷಿ ಭವನಕ್ಕೆ ರಶೀದಿ ಸಲ್ಲಿಸಬೇಕು. ಈ ರಶೀದಿಯ ಹಿನ್ನೆಲೆಯಲ್ಲಿ ಕೃಷಿಕನಿಗೆ ಪಾಲಿಸಿ ಲಭಿಸಲಿದೆ.
ಬೆಳೆ ವಿಮೆ ಸಂರಕ್ಷಣೆ ಹೊಂದಿರುವ ಬೆಳೆಗಳ ಪರಿಹಾರ ಮೊಬಲಗನ್ನು 2017ರಿಂದ ಪುನಾರಚಿಸಿ 12 ಪಟ್ಟು ಅಧಿಕಗೊಳಿಸಲಾಗಿದೆ. ತೆಂಗು, ಬಾಳೆ, ರಬ್ಬರ್, ಕರಿಮೆಣಸು, ಏಲಕ್ಕಿ, ಗೇರುಬೀಜ, ಅನಾನಾಸು, ಕಾಫಿ, ಶೂಂಠಿ, ಚಹಾ, ಹಳದಿ, ಕೊಕ್ಕೋ, ಎಳ್ಳು, ತರಕಾರಿ, ವೀಳ್ಯದೆಲೆ, ಗೆಡ್ಡೆ-ಗೆಣಸು, ಹೊಗೆಸೊಪ್ಪು, ಭತ್ತ, ಮಾವಿನ ಕಾಯಿ, ಕಿರುಧಾನ್ಯಗಳು ಇತ್ಯಾದಿ ಬೆಳೆಗಳಿಗೆ ವಿಮೆ ಸಂರಕ್ಷಣೆಯಿದೆ. ರಾಜ್ಯದ ಎಲ್ಲ ಭತ್ತದ ಕೃಷಿಕರೂ ಈ ಯೋಜನೆಯ ಸದಸ್ಯರಾಗಿದ್ದಾರೆ. ಕೀಟಬಾಧೆಯಿಂದ ಭತ್ತದ ಕೃಷಿಗೆ ಉಂಟಾಗುವ ನಾಶ-ನಷ್ಟಕ್ಕೂ ವಿಮೆ ಸಂರಕ್ಷಣೆ ದೊರೆಯಲಿದೆ. ನಷ್ಟ ಪರಿಹಾರಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?
ನಾಶ-ನಷ್ಟ ಸಂಭವಿಸಿದ 15 ದಿನಗಳೊಳಗೆ ನಿಗದಿತ ಫಾರಂನಲ್ಲಿ ಕೃಷಿ ಭವನದಲ್ಲಿ ಅರ್ಜಿ ಸಲ್ಲಿಸಬೇಕು. ಕೃಷಿ ಭವನ ಸಿಬಂದಿ ಆಗಮಿಸಿ ತಪಾಸಣೆ ನಡೆಸುವವರೆಗೆ ನಷ್ಟ ಸಂಭವಿಸಿದ ಬೆಳೆಯನ್ನು ಅದೇ ರೂಪದಲ್ಲಿ ಇರಿಸಬೇಕು. ಕೃಷಿ ಭವನಕ್ಕೆ ಅರ್ಜಿ ಸಲ್ಲಿಸಿದ 4 ದಿನಗಳಲ್ಲಿ ಸಿಬಂದಿಗೆ ನಷ್ಟ ಸಂಭವಿಸಿದ ಜಾಗಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿ, ಪ್ರಧಾನ ಕೃಷಿ ಅಧಿಕಾರಿಗೆ ವರದಿ ಸಲ್ಲಿಸುವರು. ಪ್ರೀಮಿಯಂ-ಪರಿಹಾರ
ಹತ್ತು ತೆಂಗಿನ ಮರಗಳಿರುವ ಕೃಷಿಕನಿಗೆ ಒಂದು ತೆಂಗಿನಮರಕ್ಕೆ 2 ರೂ. ರೂಪದಲ್ಲಿ ಒಂದು ವರ್ಷಕ್ಕೆ 5 ರೂ.ಗಳಂತೆ ಮೂರು ವರ್ಷ ಪ್ರೀಮಿಯಂ ಪಾವತಿಸಬೇಕು. ಈ ಮೂಲಕ ತೆಂಗಿನ ಮರವೊಂದಕ್ಕೆ 2 ಸಾವಿರ ರೂ. ನಷ್ಟ ಪರಿಹಾರ ಲಭಿಸಲಿದೆ. ಹತ್ತು ಮರಗಳಿರುವ ಕರಿಮೆಣಸು ಕೃಷಿಕನಿಗೆ 1.50 ರೂ. ಒಂದು ವರ್ಷಕ್ಕೆ, ಮೂರು ರೂ. ಮೂರು ವರ್ಷಕ್ಕೆ ಪಾವತಿಸಿದರೆ ಮರವೊಂದಕ್ಕೆ 200 ರೂ. ಪರಿಹಾರ ಲಭಿಸಲಿದೆ. 25 ರಬ್ಬರ್ ಮರಗಳಿರುವ ಕೃಷಿಕನಿಗೆ ಮರವೊಂದಕ್ಕೆ ತಲಾ 3 ರೂ. ವರ್ಷಕ್ಕೆ, 7.5 ರೂ.ನಂತೆ ಮೂರು ವರ್ಷ ಪಾವತಿಸಿದರೆ ಮರವೊಂದಕ್ಕೆ ಒಂದು ಸಾವಿರ ರೂ. ನಷ್ಟ ಪರಿಹಾರ ಲಭಿಸಲಿದೆ. ಇದೇ ರೀತಿಯಲ್ಲಿ ವಿವಿಧ ಬೆಳೆಗಳಿಗೆ ಸಂರಕ್ಷಣೆ ಲಭಿಸಲಿದೆ. ದೀರ್ಘಾವಧಿ ಬೆಳೆಗಳಿಗೆ ಪ್ರತ್ಯೇಕ ಸಂರಕ್ಷಣೆ ಇರುವುದು.