Advertisement
ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಾಡಿನಲ್ಲಿ ಪತ್ತೆಬದಿಯಡ್ಕ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮೂಲತಃ ಮಂಗಳೂರು ಬಜ್ಪೆ ನಿವಾಸಿಯೂ, ಬದಿಯಡ್ಕ ಸಮೀಪ ಕಾಡಮನೆ ಮಾಡತ್ತಡ್ಕದಲ್ಲಿ ವಾಸಿಸುತ್ತಿದ್ದ ಕೃಷ್ಣ ನಾಯ್ಕ(65) ಅವರ ಮೃತದೇಹ ಮನೆ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ದೃಷ್ಟಿದೋಷವಿದ್ದ ಅವರು ಹೃದಯ ಸಂಬಂಧ ರೋಗದಿಂದ ಬಳಲುತ್ತಿದ್ದರು. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಸರಗೋಡು: ಅಣಂಗೂರಿನಲ್ಲಿ ಆರಂಭಗೊಂಡಿರುವ ಸಿಪಿಎಂ ಕಾಸರಗೋಡು ಏರಿಯಾ ಸಮ್ಮೇಳನ ನಗರದಲ್ಲಿ ಸ್ಥಾಪಿಸಲೆಂದು ಕೂಡ್ಲು ರಾಮದಾಸನಗರ ಸುರೇಂದ್ರನ್ ಸ್ಮಾರಕ ಸಂಸ್ಮರಣಾ ಮಂಟಪದ ಬಳಿ ಸಿದ್ಧಪಡಿಸಿ ಇರಿಸಲಾಗಿದ್ದ ಧ್ವಜಸ್ತಂಭ ಕಳವಾದ ಬೆನ್ನಲ್ಲೇ 500 ಮೀಟರ್ ದೂರದಲ್ಲಿ ಹಿತ್ತಿಲೊಂದರಲ್ಲಿ ಪತ್ತೆಯಾಗಿದೆ. ಧ್ವಜಸ್ತಂಭ ಕಳವಾದ ಬಗ್ಗೆ ಸಿಪಿಎಂ ಕಾಸರಗೋಡು ಏರಿಯಾ ಕಾರ್ಯದರ್ಶಿ ಕೆ.ಮೊಹಮ್ಮದ್ ಹನೀಫಾ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು. ಯುವಕ ನಾಪತ್ತೆ
ಕಾಸರಗೋಡು: ತಳಂಗರೆ ಕೆಕೆಪುರದ ಅಲ್ತಾಫ್(35) ನಾಪತ್ತೆಯಾಗಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಈ ಬಗ್ಗೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶೋಧ ನಡೆಸುತ್ತಿದ್ದಾರೆ.
Related Articles
ಮಂಜೇಶ್ವರ: ಸಿಡಿಲು ಬಡಿದು ಬಂಗ್ರಮಂಜೇಶ್ವರ ನಿವಾಸಿ ಇಲೆಕ್ಟ್ರೀಶಿಯನ್ ಪದ್ಮನಾಭ ಅವರ ಮನೆ ಹಾನಿಗೀಡಾಗಿದೆ. ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್ ಉಪಕರಣಗಳು ಉರಿದು ನಾಶಗೊಂಡಿದೆ.
Advertisement