ಕುಂಬಳೆ: ಚಾಲಕ ಮದ್ಯದ ಅಮಲಿನಲ್ಲಿ ಗೂಗಲ್ ಮ್ಯಾಪ್ ನೋಡುತ್ತಾ ಚಲಾಯಿಸಿದ ಲಾರಿ ನಿಯಂತ್ರಣ ಕಳೆದುಕೊಂಡು ಅಂಗಡಿಗೆ ನುಗ್ಗಿದ ಘಟನೆ ಡಿ. 31ರಂದು ರಾತ್ರಿ ಸಂಭವಿಸಿದೆ.
Advertisement
ಸೀತಾಂಗೋಳಿಯಿಂದ ಸರಕು ಹೇರಿಕೊಂಡು ಮಂಗಳೂರಿಗೆ ಸಾಗುತ್ತಿದ್ದ ಲಾರಿ ಕುಂಬಳೆ ಪೊಲೀಸ್ ಠಾಣೆ ಸಮೀಪದ ಮಹಾಮಾಯ ಏಜೆನ್ಸೀ ಸ್ನ ಕಟ್ಟಡಕ್ಕೆ ಢಿಕ್ಕಿ ಹೊಡೆದಿದೆ. ಚಾಲಕ ತಲಶ್ಶೆರಿ ನೆಟ್ಟೂರು ವಡಕ್ಕುಂಬಾಟ್ ಮಿನ್ನಲ್ಪರಂಬ್ನ ಪಿ.ವಿ. ರಿನಿಲ್ (36) ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಿನಿಲ್ ಬಳಿ ಚಾಲನಾ ಪರವಾನಿಗೆ ಇಲ್ಲವೆಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು: ಸೊಳ್ಳೆ ಕಾಟದಿಂದ ಮುಕ್ತಿಗಾಗಿ ಹೊಗೆ ಹಾಕಲು ತರಗೆಲೆಗಳಿಗೆ ಬೆಂಕಿ ಹಚ್ಚುತ್ತಿದ್ದ ಸಂದರ್ಭ ದೇಹಕ್ಕೆ ಬೆಂಕಿ ತಗಲಿ ಗಂಭೀರ ಸುಟ್ಟ ಗಾಯಕ್ಕೊಳಗಾಗಿದ್ದ ಕೊನ್ನಕ್ಕಾಡ್ ಅಶೋಕಚ್ಚಾಲ್ ಕಯ್ಯುಕ್ಕಾರನ್ ಹೌಸ್ನ ಕುಂಬ (75) ಅವರು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಡಿ. 21ರಂದು ಅವಘಡ ಸಂಭವಿಸಿತ್ತು. ಬಾಲಕನಿಗೆ ಲೈಂಗಿಕ ಕಿರುಕುಳ: ಮದ್ರಸಾ ಅಧ್ಯಾಪಕನಿಗೆ ಸಜೆ
ಕಾಸರಗೋಡು: ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸಲಿಂಗ ರತಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಮದ್ರಸಾ ಅಧ್ಯಾಪಕ ನೀರ್ಚಾಲು ಪೆರಡಾಲದ ಮುಹಮ್ಮದ್ ಅಜ್ಮಲ್(32)ಗೆ ಹೊಸದುರ್ಗ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯ ಒಂದು ವರ್ಷ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ.
Related Articles
Advertisement
ಮದ್ಯ, ಹುಳಿ ರಸ ಸಹಿತ ಇಬ್ಬರ ಸೆರೆಕಾಸರಗೋಡು: ಅಬಕಾರಿ ದಳ ವಿವಿಧೆಡೆಗಳಲ್ಲಿ ನಡೆಸಿದ ದಾಳಿ ಕಾರ್ಯಾಚರಣೆಯಲ್ಲಿ ಮದ್ಯ, ಹುಳಿರಸ, ರಿಕ್ಷಾ ಸಹಿತ ಇಬ್ಬರನ್ನು ಬಂಧಿಸಿದೆ. ಮುಳಿಯಾರು ಶಿವಪುರಂನಲ್ಲಿ 96 ಟೆಟ್ರಾ ಪ್ಯಾಕೆಟ್ ಮದ್ಯ ವಶಪಡಿಸಿಕೊಂಡಿದ್ದು, ಆಟೋ ರಿಕ್ಷಾ ಸಹಿತ ಮೊಹಮ್ಮದ್ ಶಾಫಿ (44) ಎಂಬಾತನನ್ನು ಬಂಧಿಸಲಾಗಿದೆ. ಚೆಂಗಳದ ಬಿ.ಸಿ.ರೋಡ್ನಲ್ಲಿ 0.2 ಗ್ರಾಂ ಮೆಥಾಂಫಿಟ್ಟಾಮಿನ್ ವಶಪಡಿಸಿಕೊಂಡಿದ್ದು, ಅಬ್ದುಲ್ ಖಾದರ್ ಬಿ.ಎಂ. (27) ಎಂಬಾತನನ್ನು ಬಂಧಿಸಲಾಗಿದೆ. ವೆಳ್ಳರಿಕುಂಡ್ನಲ್ಲಿ 260 ಲೀಟರ್ ಹುಳಿರಸ ವಶಪಡಿಸಿಕೊಳ್ಳಲಾಗಿದೆ.