ಕಾಸರಗೋಡು: ಹತ್ತು ವರ್ಷ ಪ್ರಾಯದ ನಾಲ್ಕು ಹೆಣ್ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಧ್ಯಾಪಕನ ವಿರುದ್ಧ ಮಂಜೇಶ್ವರ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಾಪಕ ತಲೆ ಮರೆಸಿಕೊಂಡಿದ್ದಾಗಿ ಹೇಳಲಾಗುತ್ತಿದೆ. ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ ನಡೆದ ಕೌನ್ಸಿಲಿಂಗ್ನಲ್ಲಿ ಈ ಬಗ್ಗೆ ದೂರು ಲಭಿಸಿದೆ.
Advertisement
ಮನೆಯಲ್ಲಿ ಬಚ್ಚಿಟ್ಟಿದ್ದ ಗಾಂಜಾ ಸಹಿತ ಬಂಧನಕಾಸರಗೋಡು: ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯಲ್ಲಿ ಬಚ್ಚಿಡಲಾಗಿದ್ದ 4.050 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದು, ಈ ಸಂಬಂಧ ತಳಂಗರೆ ಕೆಕೆ ಪುರದ ಸವಾದ್ ಕೆ.(39)ನನ್ನು ಬಂಧಿಸಿದ್ದಾರೆ. ಮನೆಯ ಕಪಾಟಿನೊಳಗೆ ಗಾಂಜಾ ಬಚ್ಚಿಡಲಾಗಿತ್ತು.
ಕಾಸರಗೋಡು: ಮಾರಕಾಯುಧಗಳೊಂದಿಗೆ ಮನೆ ಪಕ್ಕದ ರಸ್ತೆಯಲ್ಲಿ ಜಮಾಯಿಸಿ, ಮಹಿಳೆ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಒಡ್ಡಿದ ದೂರಿನಂತೆ ಕಾಸರಗೋಡು ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಕೂಡ್ಲು ಕೇಳುಗುಡ್ಡೆ ನಿವಾಸಿ ನಿರ್ಮಲಾ(55) ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಇರಿತ ಪ್ರಕರಣ : ಕೇಸು ದಾಖಲು
ಕಾಸರಗೋಡು: ಚೆರ್ಕಳ ಬೇರ್ಕಾ ರಸ್ತೆ ಬಳಿಯ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕ ಉತ್ತರ ಪ್ರದೇಶ ಬಹರಾಯಿಚ್ ಜಿಲ್ಲೆಯ ಕೈಸರಾಗಂಜ್ ನಿವಾಸಿ ಮೊಹಮ್ಮದ್ ಅಮೀರ್ ಅನ್ಸಾರಿ(23) ಅವರಿಗೆ ಇರಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇದೇ ಕ್ವಾರ್ಟರ್ಸ್ನ ಇನ್ನೊಂದು ಕೊಠಡಿಯಲ್ಲಿ ವಾಸಿಸುವ ಉತ್ತರ ಪ್ರದೇಶ ನಿವಾಸಿಯೇ ಆಗಿರುವ ಅಮಾನ್ ವಿರುದ್ಧ ಪೊಲೀಸರು ಕೊಲೆ ಯತ್ನ ಕೇಸು ದಾಖಲಿಸಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Related Articles
ಕಾಸರಗೋಡು: ಇಲಿ ವಿಷ ಸೇವಿಸಿ ಗಂಭೀರ ಸ್ಥಿತಿಯಲ್ಲಿ ಕಣ್ಣೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದ ಕಳ್ಳಾರು ಮುಂಡೋಟ್ ನಿವಾಸಿ ಮ್ಯಾಥ್ಯೂ ಅವರ ಪತ್ನಿ ಲಿಲ್ಲಿ ಮ್ಯಾಥ್ಯೂ(65) ಸಾವಿಗೀಡಾದರು.
Advertisement
ನೇಣು ಬಿಗಿದು ಆತ್ಮಹತ್ಯೆಕಾಸರಗೋಡು: ಚಾಯೋತ್ ಚೂರಿಕ್ಕಾಡ್ ಹೌಸ್ನ ಇ.ಮುರಳೀಧರನ್ ನಾಯರ್(64) ಅವರು ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.