ಕಾಸರಗೋಡು: ಕೋಟಿಗಟ್ಟಲೆ ರೂ. ಠೇವಣಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಉತ್ತರ ಭಾರತದಲ್ಲಿ ತಲೆಮರೆಸಿಕೊಂಡಿದ್ದ ಪೆರುಂಬಳ ನಿವಾಸಿ ಮೇಲೋತ್ ಕುಂಞಿಚಂದು ನಾಯರ್(64)ನನ್ನು ಅಂಬಲತ್ತರ ಪೊಲೀಸರು ಬಂಧಿಸಿದ್ದಾರೆ.
Advertisement
ನೀಲೇಶ್ವರದಲ್ಲಿ ಖಾಸಗಿ ಹಣಕಾಸು ಸಂಸ್ಥೆಯೊಂದರ ಶಾಖೆ ಆರಂಭಿಸಿ ಹಲವರಿಂದ ಠೇವಣಿ ಸಂಗ್ರಹಿಸಿ ವಂಚಿಸಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಈತನನ್ನು ಕಾಸರಗೋಡು ಚೀಫ್ ಜ್ಯುಡೀಶಿಯಲ್ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತ ಆರೋಪಿಯ ವಿರುದ್ಧ ಅಂಬಲತ್ತರ, ಮೇಲ್ಪರಂಬ ಮತ್ತು ಹೊಸದುರ್ಗ ಠಾಣೆಗಳಲ್ಲಿ 100 ರಷ್ಟು ಪ್ರಕರಣಗಳು ದಾಖಲಾಗಿವೆ. ತಲೆ ಮರೆಸಿಕೊಂಡಿದ್ದ ಆರೋಪಿ ಪೆರಿಯ ಗುರುಪುರದಲ್ಲಿರುವ ಎರಡನೇ ಪತ್ನಿಯ ಮನೆಗೆ ಬಂದಿರುವ ಬಗ್ಗೆ ರಹಸ್ಯ ಮಾಹಿತಿ ಲಭಿಸಿತ್ತು. ಅದರಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಾಸರಗೋಡು: ಜಿಲ್ಲೆಯ ವಿವಿಧ ಠಾಣೆಗಳ 7 ಮಂದಿ ಎಸ್‌ಐಗಳನ್ನು ವರ್ಗಾಯಿಸಲಾಗಿದೆ. ಹೊಸದುರ್ಗದಿಂದ ಅನ್ಸಾರ್ ಅವರನ್ನು ಬೇಕಲಕ್ಕೆ, ಆದೂರಿನಿಂದ ಅನೂಪ್‌ರನ್ನು ಹೊದುರ್ಗಕ್ಕೆ ವರ್ಗಾಯಿಸಲಾಗಿದೆ. ಕಾಸರಗೋಡಿನಿಂದ ರಮೇಶ್‌ರನ್ನು ಆದೂರಿಗೆ, ಕಾಸರಗೋಡು ಟ್ರಾಫಿಕ್ ಯೂನಿಟ್‌ನಿಂದ ಪ್ರತೀಶ್ ಕುಮಾರ್‌ರನ್ನು ನಗರ ಠಾಣೆಗೆ, ನಗರ ಠಾಣೆಯಿಂದ ಅಖೀಲ್ ಪಿ.ಪಿ. ಅವರನ್ನು ಕಾಸರಗೋಡು ಟ್ರಾಫಿಕ್ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಹೊಸದುರ್ಗದಿಂದ ವಿ.ಪಿ.ಅಖೀಲ್‌ರನ್ನು ಕಾಸರಗೋಡು ನಗರ ಠಾಣೆಗೆ, ವಿ.ಮೋಹನ್‌ರನ್ನು ಹೊಸದುರ್ಗ ಕಂಟ್ರೋಲ್ ರೂಂನಿಂದ ಹೊಸದುರ್ಗ ಠಾಣೆಗೆ ವರ್ಗಾಯಿಸಲಾಗಿದೆ. ಕಾರು-ಲಾರಿ ಢಿಕ್ಕಿ : ಇಬ್ಬರಿಗೆ ಗಾಯ
ಉಪ್ಪಳ: ಉಪ್ಪಳ ಸರಕಾರಿ ಶಾಲೆ ಬಳಿಯ ರಸ್ತೆಯಲ್ಲಿ ಕಾರು-ಲಾರಿ ಢಿಕ್ಕಿ ಹೊಡೆದು ಕಾರಿನಲ್ಲಿ ಸಂಚರಿಸುತ್ತಿದ್ದ ಉಪ್ಪಳ ಮೂಸೋಡಿ ನಿವಾಸಿಗಳಾದ ರಾಝಿಕ್ ಮತ್ತು ನಾಝಿಯ ಗಾಯಗೊಂಡಿದ್ದಾರೆ. ಕಾರು ನಜ್ಜುಗುಜ್ಜಾಗಿದೆ.
Related Articles
ಕುಂಬಳೆ: ಸೀತಾಂಗೋಳಿಯಿಂದ ಪಾನ್ ಮಸಾಲೆ ಕೈಯಲ್ಲಿರಿಸಿಕೊಂಡಿದ್ದ ಮೊಗ್ರಾಲ್‌ಪುತ್ತೂರು ಮಂಜಿಲ್ ಹೌಸ್‌ನ ಅಬ್ದುಲ್ ಅಸೀಸ್ ಎ.ಎಂ(49)ನನ್ನು ಪೊಲೀಸರು ಬಂಧಿಸಿದ್ದಾರೆ. 750 ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಿಕೊಳ್ಳಲಾಗಿದೆ.
Advertisement