ಮುಳ್ಳೇರಿಯ: ಕಾನಕ್ಕೋಡಿನ ಬಾಡಿಗೆ ಮನೆಯಲ್ಲಿ ವಾಸಿಸುವ ರಂಜಿತ್ (37) ಅವರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Advertisement
ಮರ ಕಡಿಯುವ ಕಾರ್ಮಿಕರಾಗಿರುವ ರಂಜಿತ್ ಮೂಲತಃ ಆಲಂಪಾಡಿ ನಿವಾಸಿಯಾಗಿದ್ದು, ಇತ್ತೀಚೆಗೆ ಕಾನಕ್ಕೋಡಿನಲ್ಲಿ ಕುಟುಂಬ ಸಹಿತ ವಾಸ್ತವ್ಯ ಹೂಡಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಾಸರಗೋಡು: ಚಂದ್ರಗಿರಿ ಸೇತುವೆಯ ಬದಿ ಕಾರು, ಪಾದರಕ್ಷೆ ಬಿಟ್ಟು ಹೊಳೆಗೆ ಹಾರಿದ ಶಿರಿಬಾಗಿಲು ರಹ್ಮತ್‌ನಗರದ ನಿವಾಸಿ, ಕಾಸರಗೋಡು ನಗರದಲ್ಲಿ ಹೊಟೇಲ್ ನಡೆಸುತ್ತಿರುವ ಹಸೈನಾರ್ (46) ಅವರ ಮೃತ ದೇಹ ಶನಿವಾರ ಬೆಳಗ್ಗೆ ತಳಂಗರೆಯ ಹೊಸ ಹಾರ್ಬರ್ ಪರಿಸರದಲ್ಲಿ ಪತ್ತೆಯಾಯಿತು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ನ. 23ರಂದು ರಾತ್ರಿ ಹೊಳೆಗೆ ಹಾರಿದ್ದರು.
Related Articles
ಪೆರ್ಲ: ಹತ್ಯೆ ಯತ್ನ ಪ್ರಕರಣದ ಆರೋಪಿಯನ್ನು ಬಂಧಿಸಲು ಹೋಗಿದ್ದ ಪೊಲೀಸರಿಗೆ ಹಲ್ಲೆ ಮಾಡಿದ ಘಟನೆ ನಡೆದಿದ್ದು, ಈ ಸಂಬಂಧ ಎಂಟು ಮಂದಿ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.
Advertisement
ನ. 23ರಂದು ರಾತ್ರಿ ಪೆರ್ಲ ಚೆಕ್‌ಪೋಸ್ಟ್ ಪರಿಸರದಲ್ಲಿ ಈ ಘಟನೆ ನಡೆದಿದೆ. ಪೆರ್ಲ ನಲ್ಕ ಹೌಸ್‌ನ ಬಿ.ಮೊದೀನ್ ಕುಂಞಿ ಅವರಿಗೆ ಕಾರು ಢಿಕ್ಕಿ ಹೊಡೆಸಿ ಕೊಲೆಗೈಯ್ಯಲು ಯತ್ನಿಸಿದ ಆರೋಪಿ ನೌಶಾದ್‌ನನ್ನು ಬಂಧಿಸಲು ಹೋಗಿದ್ದ ಬದಿಯಡ್ಕ ಠಾಣೆ ಎಸ್.ಐ. ಎನ್.ಅನ್ಸಾರ್ ಹಾಗೂ ಇತರ ಪೊಲೀಸರಿಗೆ ಹಲ್ಲೆ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿ ಕತ್ತಿ ನೌಶಾದ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಮದ್ಯ ಸಾಗಾಟ : ಆರೋಪಿ ಠಾಣೆಗೆ ಹಾಜರುಮಂಜೇಶ್ವರ: ಪೊಲೀಸರನ್ನು ಕಂಡು ಮದ್ಯ, ಸ್ಕೂಟರ್ ಬಿಟ್ಟು ಪರಾರಿಯಾದ ಆರೋಪಿ ಕಣ್ವತೀರ್ಥ ನಿವಾಸಿ ಭವಿಷ್ (39) ಪೊಲೀಸ್ ಠಾಣೆಗೆ ಹಾಜರಾಗಿದ್ದಾನೆ. ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ. 15ರಂದು ಕಣ್ವತೀರ್ಥದಲ್ಲಿ ಸ್ಕೂಟರ್, ಮದ್ಯ ಬಿಟ್ಟು ಪರಾರಿಯಾಗಿದ್ದನು. 90 ಮಿಲ್ಲಿಯ 320 ಪ್ಯಾಕೆಟ್ ಮದ್ಯ ಸ್ಕೂಟರ್‌ನಲ್ಲಿ ಪತ್ತೆಯಾಗಿತ್ತು. ಕಾಪಾ ಪ್ರಕಾರ ಯುವಕನ ಬಂಧನ
ಕಾಸರಗೋಡು: ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಹೊಸದುರ್ಗ ಕಲ್ಯಾಣ ರಸ್ತೆಯ ಮುತ್ತನ್‌ಪಾರ ನಿರೋಕಿ ನಿವಾಸಿ ಎನ್. ಮನುರಾಜ್(27)ನನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೊಲೆ ಯತ್ನ, ಹಲ್ಲೆ, ಮದ್ಯ ಸಾಗಾಟ ಮೊದಲಾದ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ.