Advertisement
ಕಾಸರಗೋಡು: ಅರಣ್ಯದಿಂದ ಕಾಡು ಹಂದಿಯನ್ನು ಬೇಟೆಯಾಡಿ ಗುಂಡಿಕ್ಕಿ ಕೊಂದು ಮಾಂಸ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಬೇಡಗ ಪೊಲೀಸರು ಬಂಧಿಸಿದ್ದಾರೆ.
Related Articles
ಮಂಜೇಶ್ವರ: ಮನೆಯ ಹಿಂಭಾಗದಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ಕಳವು ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಹೊಸಬೆಟ್ಟು ಪೊಕ್ಕಿ ನಿವಾಸಿ ಅಬ್ದುಲ್ ಬಶೀರ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement
ಬೆಂಕಿ ತಗಲಿ ವೃದ್ದೆ ಸಾವುಮಂಜೇಶ್ವರ: ದೀಪದಿಂದ ಸೀರೆಗೆ ಬೆಂಕಿ ತಗಲಿ ಗಂಭೀರ ಸುಟ್ಟ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿದ್ದ ಕುಳೂರು ಪೊಯ್ಯೇಲು ನಿವಾಸಿ ದಿ|ಮದನಪ್ಪ ಶೆಟ್ಟಿ ಅವ ರ ಪತ್ನಿ ಸುನೀತಾ ಎಂ(84) ಸಾವಿಗೀಡಾದರು. ನ.14 ರಂದು ದೇವರ ಕೋಣೆಯಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಸೀರೆಗೆ ದೀಪದಿಂದ ಬೆಂಕಿ ಹತ್ತಿಕೊಂಡು ಗಂಭೀರ ಸುಟ್ಟ ಗಾಯಗೊಂಡಿದ್ದರು. ಯುವಕನ ಅಪಹರಣ : ನಾಲ್ವರ ಬಂಧನ
ಕಾಸರಗೋಡು: ಪಿಲಿಕ್ಕೋಡೆ ಮಡಿವಯಲಿನ ವೆಂಬಿರಿಞ್ಞನ್ ನಿಧಿನ್(30) ಅವರನ್ನು ನ.15 ರಂದು ರಾತ್ರಿ ಚೆರುವತ್ತೂರು ರೈಲು ನಿಲ್ದಾಣ ಪರಿಸರದಿಂದ ಆಟೋ ರಿಕ್ಷಾದಲ್ಲಿ ಅಪಹರಿಸಿ ಮಾರಕಾಯುಧಗಳಿಂದ ಹಲ್ಲೆ ಮಾಡಿ, ಅವರ ಕೈಯಲ್ಲಿದ್ದ 1800 ರೂ. ನಗದು ಮತ್ತು ಮೊಬೈಲ್ ಫೋನ್ ಎಗರಿಸಿದ ಬಳಿಕ ಅವರನ್ನು ರಸ್ತೆ ಬದಿಯಲ್ಲಿ ತಳ್ಳಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿ ಚೆರುವತ್ತೂರು ಮಲ್ಲಾಕುದಿರಿನ ಎಂ.ಝಲ್ಪಿàಕರ್(27), ಮುಹಮ್ಮದ್ ಶರೀಫ್(30), ಚೆರುವತ್ತೂರು ಪಿಲಾವಳಪ್ಪಿನ ಮೊಹಮ್ಮದ್ ಅನಸ್(20) ಮತ್ತು ಚೆರುವತ್ತೂರು ರಾಜೇಂದ್ರ ಕ್ವಾರ್ಟರ್ಸ್‌ನ ಮೊಹಮ್ಮದ್ ಸಿದ್ದೀಕ್(23)ನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಮನೆಯಿಂದ ಕಳವಿಗೆ ಯತ್ನ
ಕುಂಬಳೆ:ಪಚ್ಚಂಬಳ ಕಾಂದಲ್‌ನ ಅಬ್ದುಲ್ ರಹಿಮಾನ್ ಅವರ ಮನೆಯಿಂದ ಕಳವಿಗೆ ಯತ್ನಿಸಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯೊಳಗ್ಗೆ ನುಗ್ಗಿ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದು, ಯಾವುದೇ ವಸ್ತುಗಳನ್ನು ಕಳವು ಮಾಡಿಲ್ಲ. ಅಂಗಡಿಗೆ ನುಗ್ಗಿ ದಾಂಧಲೆ : ಕೇಸು ದಾಖಲು
ಕುಂಬಳೆ: ಕಟ್ಟತ್ತಡ್ಕದಲ್ಲಿರುವ ತೆಂಗಿನ ಕಾಯಿ ಖರೀದಿ ಅಂಗಡಿಗೆ ನುಗ್ಗಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಗಣೇಶನ್ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಲಾರಿ ಢಿಕ್ಕಿ : ವೃದ್ಧನಿಗೆ ಗಾಯ
ಕುಂಬಳೆ: ಆರಿಕ್ಕಾಡಿ ಜಂಕ್ಷನ್‌ನಲ್ಲಿ ನಡೆದು ಹೋಗುತ್ತಿದ್ದಾಗ ಹಾಲು ಸಾಗಿಸುತ್ತಿದ್ದ ಲಾರಿ ಢಿಕ್ಕಿ ಹೊಡೆದು ಆರಿಕ್ಕಾಡಿ ನಿವಾಸಿ ಅಬ್ದುಲ್ಲ(69) ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.