Advertisement

ಕಾಸರಗೋಡಿನಿಂದ ಕರ್ನಾಟಕಕ್ಕೆ ಬಂತು ‘ಸರ್ಕಾರಿ ಶಾಲೆ’..!

05:13 PM Oct 05, 2017 | |

‘ಕಿರಿಕ್‌ ಪಾರ್ಟಿ’ಯ ಸೃಷ್ಟಿಕರ್ತ ಕರಾವಳಿಯ ರಿಶಬ್‌ ಶೆಟ್ಟಿ ಯೋಚನೆಯಕುತೂಹಲ ಮೂಡಿಸಿದ ಸ್ಯಾಂಡಲ್‌
ವುಡ್‌ನ‌ ‘ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು- ಕೊಡುಗೆ ರಾಮಣ್ಣ ರೈ’ ಚಿತ್ರದ ಶೂಟಿಂಗ್‌ ಭರದಿಂದ ನಡೆಯುತ್ತಿದೆ. 

Advertisement

ಬಹುತೇಕ ಶೂಟಿಂಗ್‌ ಕಾಸರಗೋಡಿನಲ್ಲಿಯೇ ನಡೆಯಬೇಕಾಗಿತ್ತಾದರೂ, ಶೂಟಿಂಗ್‌ ಸ್ಪಾಟ್‌ ಅನ್ನು ಈಗ ಕೊಂಚ ಚೇಂಜ್‌ ಮಾಡಲಾಗಿದೆ. ಕಾಸರಗೋಡಿನಲ್ಲಿ ಕೆಲವು ಹಂತದ ಶೂಟಿಂಗ್‌ ನಡೆಸಲು ನಿರ್ಧರಿಸಿರುವ ರಿಶಬ್‌, ಸದ್ಯಕ್ಕೆ ಕೇರಳ- ಕರ್ನಾಟಕ ಗಡಿ ಭಾಗವಾದ ಮಂಗಳೂರು ಹೊರವಲಯದ ಮುಡಿಪು ಪಕ್ಕದ ಬಾಳೆಪುಣಿ ವ್ಯಾಪ್ತಿಯ ಶಾಲೆಯಲ್ಲಿ ಶೂಟಿಂಗ್‌ ನಡೆಸುತ್ತಿದ್ದಾರೆ. 

ಕೇರಳದಲ್ಲಿ ಶೂಟಿಂಗ್‌ ನಡೆಸುವುದಾದರೆ ತಾಂತ್ರಿಕ ವರ್ಗದ ಬಜೆಟ್‌ ದುಪ್ಪಟ್ಟಾಗುತ್ತದೆ ಹಾಗೂ ಕಥೆಗೆ ಬೇಕಾದ ಉತ್ತಮ ಲೊಕೇಶನ್‌ ಸಿಗದ ಕಾರಣ ಸ್ವಲ್ಪ ದಿನಕ್ಕೆ ಕೇರಳದಿಂದ ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿದೆ ಎಂಬ ಮಾಹಿತಿ ಇದೆ. 

ಈ ಬಗ್ಗೆ ರಿಶಬ್‌ ಶೆಟ್ಟಿ ಅವರಲ್ಲಿ ಮಾತನಾಡಿದಾಗ, ಅವರು ಹೇಳುವುದು ಹೀಗೆ .. ನನ್ನ ಕಥೆಗೆ ಕೇರಳದ ಶಾಲೆಯಲ್ಲಿಯೇ ಶೂಟಿಂಗ್‌ ನಡೆಸುವುದು ಎಂದು ನಿರ್ಧರಿಸಲಾಗಿತ್ತು. ಆದರೆ, ಆ ಶಾಲೆಯ ಹತ್ತಿರ ಬಿಲ್ಡಿಂಗ್‌ ಇರುವುದರಿಂದ ಸ್ವಲ್ಪ ಸಮಸ್ಯೆ ಆಯಿತು. ಬಳಿಕ ತಾಂತ್ರಿಕ ವೆಚ್ಚ ಕೂಡ ದುಪ್ಪಟ್ಟಾಗುವ ವಿಷಯ ತಿಳಿಯಿತು. ಕೊನೆಗೆ ನಾನು ಕಥೆಗೆ ಅಂದುಕೊಳ್ಳುವ ರೀತಿಯ ಲೊಕೇಶನ್‌ ಹಾಗೂ ಶಾಲೆ ಬಾಳೆಪುಣಿಯಲ್ಲಿ ದೊರೆಯಿತು. ಮುಡಿಪು ವ್ಯಾಪ್ತಿ ಈ ಕಥೆಗೆ ಫಿಟ್‌ ಅನಿಸಿತು. ಹೀಗಾಗಿ ಇಲ್ಲೇ ಸುಮಾರು 40 ದಿನ ಶೂಟಿಂಗ್‌ ನಡೆಸುತ್ತಿದ್ದೇವೆ. ಕೊನೆಯಲ್ಲಿ ಮತ್ತೆ
ಕಾಸರಗೋಡಿನಲ್ಲಿ ಶೂಟಿಂಗ್‌ ನಡೆಯಲಿದೆ ಎಂದರು.

1 ಸಿಟ್ಟು; 2 ಸಿನೆಮಾ..!
ಕೋಸ್ಟಲ್‌ವುಡ್‌ ದಿನಕಳೆದಂತೆ ಪಕ್ಕಾ ಸ್ಯಾಂಡಲ್‌ವುಡ್‌ ಸ್ಟೈಲ್‌ಗೆ ಮಗ್ಗುಲು ಬದಲಿಸುತ್ತಿದೆ. ದಿನಕ್ಕೊಂದು ಸಿನೆಮಾದ ಟೈಟಲ್‌ ಇಲ್ಲಿ ಬುಕ್‌ ಆಗುವಷ್ಟರ ಮಟ್ಟಿಗೆ ಕೋಸ್ಟಲ್‌ವುಡ್‌ ಶೈನಿಂಗ್‌ ಆಗಿದೆ. ಹೀಗಾಗಿಯೇ ಇಲ್ಲಿ ಒರಿಯನ್‌ ತೂಂಡ ಒರಿಯಗಾಪುಜಿ ಮನಸ್ಥಿತಿ ಬೆಳೆಯತೊಡಗಿದೆ. ನಿರ್ಮಾಪಕರು, ಕಲಾವಿದರ ಮಧ್ಯೆ ಅವನ ಕಂಡ್ರೆ ಇವನಿಗಾಗಲ್ಲ..! ಎಂಬಂಥ ಪರಿಸ್ಥಿತಿ ಇದೆ.. ಆದರೂ, ಯಾರೂ ಕೂಡ ಬಹಿರಂಗವಾಗಿ ಹೇಳಿಕೊಳ್ಳಲು ಮುಂದಾಗುತ್ತಿಲ್ಲ. ಇತ್ತೀಚೆಗೆ ಸಖತ್‌ ಹಿಟ್‌ ಚಿತ್ರವೊಂದರ ನಿರ್ಮಾಪಕ ಹಾಗೂ ನಿರ್ದೇಶಕನ ಮಧ್ಯೆ ಮಚ್‌- ಮಚ್‌ ಶುರುವಾಗಿತ್ತು! ಇದು ಇಂದು ನಿನ್ನೆಯಿಂದಲ್ಲ. ಸಿನೆಮಾ ಗೆಲುವು ಕಾಣುವ ಹಂತದಲ್ಲಿಯೇ ಆಗಿತ್ತು. ಹಿಟ್‌ ಸಿನೆಮಾ ಮಾಡಿದವರು ಜತೆಯಾಗಿ ಮತ್ತೂಂದು ಸಿನೆಮಾ ಮಾಡುತ್ತಾರೆ ಎಂಬ ಮಾತೂ ಹರಿದಾಡುವ ಕಾಲದಲ್ಲಿಯೇ ಇಬ್ಬರು ಮುಖ ತಿರುಗಿಸಲು ಶುರು ಮಾಡಿದ್ದರು. ಇದು ಮುಂದುವರಿದಂತೆ, ಇಬ್ಬರೊಳಗಿನ ಆಂತರ್ಯದ ಸಿಟ್ಟು ಅವರಿಬ್ಬರಿಬ್ಬರನ್ನು ಬೇರೆ ಬೇರೆ ಮಾಡಿ ಎರಡು ಬೇರೆ ಬೇರೆ ಸಿನೆಮಾ ಮಾಡಲು ಪ್ರಚೋದನೆ ನೀಡಿತ್ತು. ವಿಶೇಷ ಅಂದರೆ ಈ ಎರಡೂ ಸಿನೆಮಾಗಳು ಒಂದೇ ಕಾಲಕ್ಕೆ ಶೂಟಿಂಗ್‌ ಕೂಡ ಪೈಪೋಟಿಗೆ ಬಿದ್ದಂತೆ ನಡೆಸುತ್ತಿವೆ. ಇವರ ಸಿಟ್ಟಿನ ಫಲವಾಗಿ ಎರಡು ಸಿನೆಮಾಗಳು ತೆರೆಗೆ ಬರುತ್ತಿವೆ. 

Advertisement

‘ಅಂಬರ ಕ್ಯಾಟರರ್’ನ ಫುಡ್‌ ರೆಡಿ..!
ನಾಗೇಶ್ವರ ಸಿನಿಕಂಟೈನ್ಸ್‌ನಲ್ಲಿ ತುಳುವಿನಲ್ಲಿ ತಯಾರಾದ ಬಿಗ್‌ ಬಜೆಟ್‌ ಮೂವಿ “ಅಂಬರ ಕ್ಯಾಟರರ್’ನ ಧ್ವನಿಸುರುಳಿ
ಬಿಡುಗಡೆ ಮೊನ್ನೆ ತಾನೇ ಅಸೈಗೋಳಿಯ ಆಶ್ರಮದಲ್ಲಿ ನಡೆದಿದೆ. ಈಗ ಚಿತ್ರ ಯಾವಾಗ ರಿಲೀಸ್‌ ಅನ್ನುವ
ಕುತೂಹಲ ಮೂಡಿದೆ. ಚಿತ್ರತಂಡ ಹೇಳುವ ಪ್ರಕಾರ ಇದೇ ತಿಂಗಳಿನಲ್ಲಿ ಕ್ಯಾಟರರ್ ಬಡಿಸಲು ರೆಡಿಯಾಗಿದೆ. ಆದರೆ,
ದಿನ ಯಾವಾಗ ಎಂದು ಇನ್ನೂ ಪಕ್ಕಾಗಿಲ್ಲ. ಸುರೇಶ್‌ ಎಸ್‌. ಭಂಡಾರಿ ಚಿತ್ರದ ನಿರ್ಮಾಪಕರಾಗಿದ್ದು, ಜೈಪ್ರಸಾದ್‌
ನಿರ್ದೇಶಿಸಿದ್ದಾರೆ. ಸೌರಭ ಭಂಡಾರಿ ಚಿತ್ರದ ನಾಯಕ ನಟರಾಗಿದ್ದು, ಸಿಂಧೂ ಲೋಕನಾಥ್‌ ನಾಯಕಿ, ಕನ್ನಡದ
ಭಾರತೀ ವಿಷ್ಣುವರ್ಧನ್‌, ಶರತ್‌ ಲೋಹಿತಾಶ್ವ, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ
ವಾಮಂಜೂರು ಮೊದಲಾದವರ ತಾರಾಗಣವಿದೆ. ಈ ಮಧ್ಯೆ ತುಳುವಿನ ‘ದಿಬ್ಬಣ’ ಸಿನೆಮಾ ಕೂಡ ಹೊರಡಲು
ರೆಡಿಯಾಗಿದ್ದು, ಇದೇ ತಿಂಗಳಿನಲ್ಲಿ ನಾವು ರೆಡಿ ಎಂದು ಚಿತ್ರತಂಡ ಹೇಳುತ್ತಿದೆ. ಹೀಗಾಗಿ ಯಾರು ಮೊದಲು
ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.  

Advertisement

Udayavani is now on Telegram. Click here to join our channel and stay updated with the latest news.

Next