Advertisement

Kasaragod: ಲಂಚ ಪಡೆದ ಪ್ರಕರಣ: ಫೀಲ್ಡ್‌ ಅಸಿಸ್ಟೆಂಟ್‌ ಬಂಧನ

01:19 AM Apr 02, 2024 | Team Udayavani |

ಕಾಸರಗೋಡು: ಭೂಮಿಯ ದಾಖಲು ಪತ್ರ ಸರಿಪಡಿಸಲು ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಅಡೂರು ಗ್ರಾಮ ಕಚೇರಿ ವಿಲೇಜ್‌ ಫೀಲ್ಡ್‌ ಅಸಿಸ್ಟೆಂಟ್‌, ಕಾರಡ್ಕ ಕರ್ಮಂತೋಡಿ ನಿವಾಸಿ ಕೆ. ನಾರಾಯಣನ್‌(47)ನನ್ನು ವಿಜಿಲೆನ್ಸ್‌ ಡಿವೈಎಸ್‌ಪಿ ಪಿ. ಉಣ್ಣಿಕೃಷ್ಣನ್‌ ನೇತೃತ್ವದ ತಂಡ ಬಂಧಿಸಿದೆ.

Advertisement

ನಾರಾಯಣನ್‌ ದೂರುದಾತನಿಂದ ಪಡೆದು ಕಾರಿನಲ್ಲಿರಿಸಿದ್ದ 20 ಸಾವಿರ ರೂ. ವಶಪಡಿಸಿದೆ. ಆದೂರು ಆಲಂತಡ್ಕದ ಪಿ. ರಮೇಶನ್‌ ಅವರಿಂದ ವಿಲೇಜ್‌ ಫೀಲ್ಡ್‌ ಅಸಿಸ್ಟೆಂಟ್‌ ನಾರಾಯಣನ್‌ ಲಂಚ ಪಡೆದಿರುವುದಾಗಿ ದೂರಲಾಗಿದೆ. ರಮೇಶನ್‌ ಅವರ ತರವಾಡು ಮನೆ ಹಾಗು ಕುಟುಂಬ ಕ್ಷೇತ್ರ ಅಡೂರು ವಿಲೇಜ್‌ನ ಪಾಂಡಿವಯಲ್‌ನಲ್ಲಿದೆ. ಅಲ್ಲಿ ಅವರ ತಾಯಿಯ ಚಿಕ್ಕಮ್ಮನ ಪುತ್ರಿ ವಾಸಿಸುತ್ತಿದ್ದಾರೆ. ಅಲ್ಲಿರುವ 54 ಸೆಂಟ್ಸ್‌ ಸ್ಥಳದಲ್ಲಿ ಹಲವು ವರ್ಷಗಳಿಂದಲೂ ವಾಸಿಸುತ್ತಿದ್ದರೂ ಪಟ್ಟಾ ಲಭಿಸಿರಲಿಲ್ಲ. ಇದರಿಂದ 2023ರ ಸೆ. 16ರಂದು ಕಾಸರಗೋಡು ಲ್ಯಾಂಡ್‌ ಟ್ರಿಬ್ಯೂನಲ್‌ಗೆ ಅರ್ಜಿ ಸಲ್ಲಿಸಿದ್ದರು. ಅನಂತರ ಸುಮೋಟೋ ಪ್ರೊಫೋಸಲ್‌ ಸಿದ್ಧಪಡಿಸಲು ಗ್ರಾಮ ಕಚೇರಿಗೆ ಅರ್ಜಿ ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ನಾರಾಯಣನ್‌ ಲಂಚ ಕೇಳಿದ್ದರೆನ್ನಲಾಗಿದೆ.

ಈ ಮಧ್ಯೆ ಕಾಸರಗೋಡು ತಾಲೂಕು ಕಚೇರಿಯಲ್ಲಿ ಚುನಾವಣ ವಿಭಾಗಕ್ಕೆ ವರ್ಗಾವಣೆಗೊಂಡ ನಾರಾಯಣನ್‌ ಹಣದೊಂದಿಗೆ ಅಲ್ಲಿಗೆ ಬರುವಂತೆ ರಮೇಶ್‌ ಅವರಲ್ಲಿ ತಿಳಿಸಿದ್ದರು. ಅದರಂತೆ ತಾಲೂಕು ಕಚೇರಿಗೆ ತಲುಪಿದ ದೂರುಗಾರನನ್ನು ಸೇರಿಸಿಕೊಂಡು ನಾರಾಯಣನ್‌ ತನ್ನ ಕಾರಿನಲ್ಲಿ ಕಲೆಕ್ಟರೇಟ್‌ನ ಲ್ಯಾಂಡ್‌ ಟ್ರಿಬ್ಯೂನಲ್‌ ಕಚೇರಿಗೆ ತೆರಳಿ ಮರಳಿ ಬರುತ್ತಿದ್ದಾಗ ತಾಲೂಕು ಕಚೇರಿಯ ಸಮೀಪದಲ್ಲಿ ನಾರಾಯಣನನ್ನು ಬಂಧಿಸಲಾಗಿದೆ. ಬಳಿಕವಿಜಿಲೆನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಬೈಕ್‌- ಸರಕಾರಿ ಬಸ್‌ ಢಿಕ್ಕಿ; ವ್ಯಕ್ತಿ ಸಾವು
ಕಾಸರಗೋಡು: ಪಯ್ಯನ್ನೂರು ಪೆರುಂಬದ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣ ಪರಿಸರದಲ್ಲಿ ಬಸ್‌-ಬೈಕ್‌ ಢಿಕ್ಕಿ ಹೊಡೆದು ನಾಯಮ್ಮಾರಮೂಲೆಯ ಐಟಿಐ ರಸ್ತೆಯ ಹೈದ್ರೋಸ್‌ ಮಂಜಿಲ್‌ನ ಅಬ್ದುಲ್ಲ ಕುಂಞಿ ಅವರ ಪುತ್ರ ಬಶೀರ್‌(57) ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next