Advertisement
ಸಾಮಗ್ರಿಗಳನ್ನು ಇರಿಸಿದ ಸ್ಥಳದಲ್ಲಿ ಹಂದಿ ಅಲೆದಾಡಿದ್ದು, ಕೆಲವು ಹೊತ್ತು ಆತಂಕಕ್ಕೆ ಕಾರಣವಾಯಿತು. ಅಂಗಡಿಯಲ್ಲಿದ್ದವರು ದೂರಕ್ಕೆ ಸರಿದಾಗ ಕಾಡು ಹಂದಿ ಹೊರಗೆ ಓಡಿ ಶಾಲಾ ಅಂಗಳದತ್ತ ತೆರಳಿತು. ಕಳೆದ ಕೆಲವು ತಿಂಗಳಿನಿಂದ ಕುಂಬಳೆ ಪೇಟೆಯಲ್ಲಿ ಕಾಡು ಹಂದಿ ಕಂಡು ಬರುತ್ತಿದೆ.
ಕಾಸರಗೋಡು, ಡಿ. 25: ಬ್ಯಾಂಕ್ಗೆ ಪಾವತಿಸಲು ತಂದ ಹಣದಲ್ಲಿ 500 ರೂ. ಮುಖ ಬೆಲೆಯ ಐದು ಖೋಟಾನೋಟುಗಳು ಪತ್ತೆಯಾದ ಬಗ್ಗೆ ಕಾಸರಗೋಡು ಪೊಲೀಸರಿಗೆ ಬ್ಯಾಂಕ್ ಆಫ್ ಇಂಡಿಯಾದ ಕಾಸರಗೋಡು ಎಂ.ಜಿ. ರಸ್ತೆ ಶಾಖೆಯ ಮೆನೇಜರ್ ಲತಿಕಾ ಎ. ದೂರು ನೀಡಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ವ್ಯಾಪಾರ ಸಂಸ್ಥೆಯೊಂದರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗೆ ಇ.ಕೆ. ಮುನಾವಿರ್ ಪಾವತಿಸಲು ತಂದ 3,54,200 ರೂ.ಗಳ ನೋಟಿನ ಕಂತೆಯಲ್ಲಿ 500 ರೂ. ಮುಖಬೆಲೆಯ ಐದು ಖೋಟಾನೋಟು ಪತ್ತೆಯಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.