Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಚಿತ್ರಣವನ್ನೇ ಬದಲಾಯಿಸಿ ಕನ್ನಡ ಕಟ್ಟುವ ಕೆಲಸ ಮಾಡುತ್ತೇನೆ. ಪ್ರಮುಖವಾಗಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದರಿಂದ ಗೆಲುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.
Related Articles
Advertisement
ಕಸಾಪ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತರೆ ಮೊದಲಿಗೆ ಬಾಪುಗೌಡ ದರ್ಶನಾಪುರ ರಂಗಮಂದಿರಕ್ಕೆ ಅತ್ಯಾಧುನಿಕ ಧ್ವನಿ ವರ್ಧಕ, ಬೆಳಕು, ಸುಃಖಾಸನಗಳ ವ್ಯವಸ್ಥೆ ಕಲ್ಪಿಸಿ ಆಧುನಿಕ ಸ್ಪರ್ಶ ನೀಡಲಾಗುವುದು. ವಿವಿಧ ತಾಲೂಕುಗಳಲ್ಲಿ ಕನ್ನಡ ಭವನ, ವಲಯ ಮಟ್ಟದಲ್ಲಿ ಸಾಹಿತ್ಯಿಕ ಚಟುವಟಿಕೆಗಳು, ಪುಸ್ತಕ ಸಂತೆ, ಗಡಿನಾಡು ಕನ್ನಡ ಕಾರ್ಯಕ್ರಮ ಕಡ್ಡಾಯವಾಗಿ ಏರ್ಪಡಿಸುವ ಕೆಲಸ ಮಾಡುತ್ತೇನೆ. ಜಿಲ್ಲೆಯ ಹಿರಿಯ, ಕಿರಿಯ ಸಾಹಿತಿಗಳ ಮಾಹಿತಿಯುಳ್ಳ ನೂತನ ಕೈಪಿಡಿ ಹೊರ ತರಲಾಗುವುದು ಎಂದು ವಿವರಿಸಿದರು.
ಕಸಾಪ ಮಾಜಿ ಗೌರವ ಕಾರ್ಯದರ್ಶಿ ವಿಜಯಕುಮಾರ ಪರುತೆ, ಪ್ರಮುಖರಾದ ಲಿಂಗರಾಜ್ ಸಿರಗಾಪುರ, ಡಾ| ರಾಜೇಂದ್ರ ಯರನಾಳೆ, ಸೋಮಶೇಖರ ಮಠಪತಿ, ವಿಜಯಕುಮಾರ ಮಠಪತಿ, ಎಸ್. ಎಲ್. ಪಾಟೀಲ, ಆನಂದ ಕಪನೂರ ಮುಂತಾದವರಿದ್ದರು.
ಕಸಾಪಗೆ ಅಧ್ಯಕ್ಷನಾಗಿ ಚುನಾಯಿತನಾದರೆ ಜಿಲ್ಲಾ ಘಟಕವನ್ನು ಯಾವುದೇ ಅಡ್ಡಿ ಆತಂಕವಿಲ್ಲದೇ, ವಿವಾದಗಳಿಲ್ಲದೇ ಮುನ್ನಡೆಸಿಕೊಂಡು ಹೋಗಲಾಗುವುದು. ಕನ್ನಡ ನಾಡು, ನುಡಿ ಸೇವೆ ಮಾಡುವ ಉತ್ಸುಕತೆಯಿದೆ. -ಬಿ.ಎಚ್. ನಿರಗುಡಿ, ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ