Advertisement

ಕಸಾಪ ಚಟುವಟಿಕೆಗಳು ನಿರಂತರ: ವೀರಭದ್ರಸ್ವಾಮಿ

03:23 PM Mar 18, 2022 | Team Udayavani |

ಚಳ್ಳಕೆರೆ: ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಗಳು ಎಲ್ಲರ ಮನೆ, ಮನ ಮುಟ್ಟುವಂತೆ ಮಾಡುವಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ನಿರಂತರ ಶ್ರಮಿಸಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ನಿಯೋಜಿತ ಅಧ್ಯಕ್ಷ, ವಿಶ್ವಭಾರತಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಜಿ.ಟಿ. ವೀರಭದ್ರಸ್ವಾಮಿ ತಿಳಿಸಿದರು.

Advertisement

ಶಾಲೆಯ ಸಭಾಂಗಣದಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್‌ ನ ನೂತನ ಅಧ್ಯಕ್ಷ ಪದಗ್ರಹಣ ಸಮಾರಂಭದ ಬಗ್ಗೆ ಮಾಹಿತಿ ನೀಡಿದ ಅವರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಮಾರ್ಗದರ್ಶನದಲ್ಲಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್‌ ಘಟಕ ಕಾರ್ಯನಿರ್ವಹಿಸಲಿದ್ದು, ಪ್ರಾರಂಭದ ಹಂತದಲ್ಲಿ ನಗರದ ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಬೆಳವಣಿಗೆಗೆ ಶ್ರಮಿಸಿದ ಹಿರಿಯರ ಮಾರ್ಗದರ್ಶನದಲ್ಲಿ ಅಧ್ಯಕ್ಷರ ಆಯ್ಕೆ ನಡೆದು ಈಗ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ತ್ಯಾಗರಾಜ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಮಾ.19ರ ಶನಿವಾರ ಬೆಳಗ್ಗೆ 11ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಲಿದ್ದು, ಸಾಹಿತಿ, ನಿವೃತ್ತ ಪ್ರಾಚಾರ್ಯ ಡಾ| ವೃಷಬೇಂದ್ರ ಆಚಾರ್‌ ಅರ್ಕಸಾಲಿ ಉಪನ್ಯಾಸ ನೀಡುವರು.

ನಗರಸಭೆ ಅಧ್ಯಕ್ಷೆ ಸುಮಕ್ಕ ಆಂಜಿನಪ್ಪ, ತಹಶೀಲ್ದಾರ್‌ ಎನ್‌.ರಘುಮೂರ್ತಿ, ಬಿಇಒ ಕೆ.ಎಸ್‌. ಸುರೇಶ್‌, ಬಾಪೂಜಿ ವಿದ್ಯಾಸಂಸ್ಥೆ ಆಡಳಿತಾಧಿ ಕಾರಿ ಜಿ.ಬಾಲರೆಡ್ಡಿ, ಹಿರಿಯ ಸಾಹಿತಿ ಬಿ.ತಿಪ್ಪಣ್ಣ ಮರಿಕುಂಟೆ, ನಾಟಕ ಅಕಾಡೆಮೆ ಮಾಜಿ ಸದಸ್ಯ ಪಿ.ತಿಪ್ಪೇಸ್ವಾಮಿ, ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಜೆ. ವೆಂಕಟೇಶ್‌, ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್‌. ಮಲ್ಲಿಕಾರ್ಜುನಯ್ಯ ಮುಂತಾದವರು ಪಾಲ್ಗೊಳ್ಳುವರು.

ಪದಗ್ರಹಣ ಸಮಾರಂಭಕ್ಕೆ ತಾಲೂಕಿನ ಸಮಸ್ತ ಕನ್ನಡಿಗರು, ಅಜೀವ ಸದಸ್ಯರು ಆಗಮಿಸುವಂತೆ ಅವರು ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ನ ಮಾಜಿ ಅಧ್ಯಕ್ಷ ಪಿ.ಜಗದೀಶ್‌, ಭಾಷ ವೇದಿಕೆ ಅಧ್ಯಕ್ಷ ನಿಜಲಿಂಗಪ್ಪ, ಡಾ| ಜಿ.ವಿ.ರಾಜಣ್ಣ, ಎಚ್‌.ಮಂಜುನಾಥ, ಸಚ್ಚಿದಾನಂದ, ಮಹಂತೇಶ್‌ನಾಯಕ, ಜನಾರ್ದನ್‌ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next