Advertisement

ಕೆಎಎಸ್‌ ಪರೀಕ್ಷಾ ಅಕ್ರಮ: ಸರ್ಕಾರಕ್ಕೆ ಹೈ ನೋಟಿಸ್‌

10:50 PM Feb 25, 2020 | Lakshmi GovindaRaj |

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮುಖಾಂತರ 2015ರ ಸಾಲಿನ “ಗೆಜೆಟೆಡ್‌ ಪ್ರೊಬೆಷನರಿ’ (ಕೆಎಎಸ್‌) ಎ ಮತ್ತು ಬಿ ಗ್ರೂಪ್‌ನ ನೇಮಕಾತಿಯಲ್ಲಿ ಪರೀಕ್ಷಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

ಪರೀಕ್ಷಾ ಅಕ್ರಮಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಮತ್ತು ಅಂತಿಮ ಆಯ್ಕೆ ಪಟ್ಟಿಗೆ ತಡೆ ನೀಡುವಂತೆ ಕೋರಿ ಬಿ.ಕೆ. ಸುಧನ್ವಾ ಹಾಗೂ ಇತರ 14 ಮಂದಿ ಸಲ್ಲಿಸಿದ್ದ ಅರ್ಜಿ ಯು ನ್ಯಾ. ಎಸ್‌.ಎನ್‌. ಸತ್ಯನಾರಾಯಣ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಮಂಗಳವಾರ ವಿಚಾಣೆ ನಡೆಯಿತು.

ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯ ದರ್ಶಿ, ಕೆಪಿಎಸ್ಸಿ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಿ, ಎರಡು ವಾರಗಳಲ್ಲಿ ಅರ್ಜಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಡಿ. ಆರ್‌.ರವಿಶಂಕರ್‌ ವಾದ ಮಂಡಿಸಿ, 2015ನೇ ಸಾಲಿನ ಕೆಪಿಎಸ್ಸಿ ಪರೀಕ್ಷೆಯ ಡಿಜಿಟಲ್‌ ಮೌಲ್ಯಮಾಪನದಲ್ಲಿ ಭಾರಿ ಅಕ್ರಮ ನಡೆದಿದೆ. ಇದನ್ನು ಪತ್ತೆಹಚ್ಚಲು ಸೈಬರ್‌ ಅಪರಾಧ ವಿಭಾಗದ ತಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು ಮತ್ತು ಇದನ್ನು ಸಿಬಿಐ ತನಿಖೆಗೆ ಒಪ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದರು.

ಡಿಜಿಟಲ್‌ ಮೌಲ್ಯಮಾಪನ ನಡೆಸಿರುವ ಲಿಖೀತ ಪರೀಕ್ಷೆಯ ಉತ್ತರ ಪತ್ರಿಕೆಗಳಲ್ಲಿ ತಮಗೆ ಬೇಕಾದ ಅಭ್ಯರ್ಥಿಗಳ ಅಂಕಗಳನ್ನು ತಿದ್ದಲಾಗಿದೆ. ಇದಕ್ಕಾಗಿ ಸೂಪರ್‌ ಯೂಸರ್‌ ಕಂಟ್ರೋಲ್‌ ಯುನಿಟ್‌ನ ಪಾಸ್‌ವರ್ಡ್‌ ಅನ್ನು ಪದೇ ಪದೆ ಬಳಿಸಿ ಲಾಗಿನ್‌ ಮಾಡಿ ಅಕ್ರಮ ಎಸಗಲಾಗಿದೆ. ಈ ಪಾಸ್‌ವರ್ಡ್‌ ಪರೀಕ್ಷಾ ಮುಖ್ಯ ನಿಯಂತ್ರಕರು ಮಾತ್ರ ಉಪಯೋಗಿಸಬೇಕು.

Advertisement

ಆದರೆ, ಹೆಚ್ಚು ಜನ ಇದರ ಪಾಸ್‌ವರ್ಡ್‌ ಬಳಸಿದ್ದಾರೆ. ಈ ಕುರಿತಂತೆ ಅಭ್ಯರ್ಥಿಗಳ ಲಿಖೀತ ಪರೀಕ್ಷೆಯ ವೈಯಕ್ತಿಕ ಅಂಕಗಳನ್ನು ಕೇಳಿದರೆ ಕೊಡಲು ಕೆಪಿಎಸ್ಸಿ ನಿರಾಕರಿಸುತ್ತಿದೆ. ಮಾಹಿತಿ ಹಕ್ಕು ಅಡಿಯಲ್ಲೂ ಮಾಹಿತಿ ಸಿಗುತ್ತಿಲ್ಲ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

428 ಹುದ್ದೆಗಳ ನೇಮಕಾತಿ: 2015ನೇ ಸಾಲಿನ 428 ಗೆಜೆಟೆಡ್‌ ಪ್ರೊಬೆ ಷನರಿ ಹುದ್ದೆಗಳ ನೇಮಕಾತಿಗೆ 2017ರಲ್ಲಿ ಅಧಿಸೂಚನೆ ಹೊರಡಿಸಲಾ ಗಿತ್ತು. ಅದೇ ವರ್ಷ ಆ. 20ರಂದು ಪ್ರಾಥಮಿಕ ಪರೀಕ್ಷೆ, ಡಿ. 16- 23ರವರೆಗೆ ಮುಖ್ಯ ಪರೀಕ್ಷೆ ನಡೆಸಲಾಗಿತ್ತು.

8,500 ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಬರೆದಿ ದ್ದರು. 2019ರ ಜನವರಿಯಲ್ಲಿ ಮುಖ್ಯ ಪರೀಕ್ಷೆಯ ಫ‌ಲಿತಾಂಶ ಪ್ರಕಟವಾಗಿತ್ತು. 1:5ರ ಅನುಪಾತದಲ್ಲಿ 2,123 ಅಭ್ಯರ್ಥಿ ಗಳನ್ನು 2019ರ ಆಗಸ್ಟ್‌ನಲ್ಲಿ ಸಂದರ್ಶನಕ್ಕೆ ಕರೆಯಲಾಗಿತ್ತು. 2020ರ ಜನವರಿ ಯಲ್ಲಿ ಅಂತಿಮ ಪಟ್ಟಿ ಪ್ರಕಟಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next