Advertisement
ಆಟೋ ಚಾಲಕ ಹಾಗೂ ಆಟೋದಲ್ಲಿದ್ದ ಮತ್ತೊಬ್ಬ ವ್ಯಕ್ತಿಯನ್ನು ಹಣ ಸಮೇತ ಬಂಧಿಸಲಾಗಿದೆ. ಬಂಧಿತರನ್ನು ಕುಮಟಾ ಕಾಗಾಲದ ರವಿ ಪಂಡಿತ್ ಹಾಗೂ ಶಿವಮೊಗ್ಗದ ಭರತ್ ಎಂದು ಗುರುತಿಸಲಾಗಿದೆ. ಕುಮಟಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಚಂದಾವರ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದೆ ಆಟೋ-ರಿಕ್ಷಾದಲ್ಲಿ 93ಲಕ್ಷದ 50 ಸಾವಿರ ರೂ ಗಳನ್ನು ಎಸ್.ಎಸ್.ಟಿ. ತಂಡ ಮತ್ತು ಫ್ಲೈಯಿಂಗ್ ಸ್ಕ್ವಾಡ್ ತಂಡದವರು ವಶಪಡಿಸಿಕೊಂಡಿದ್ದು, ಹಣವನ್ನು ಉಪಖಜಾನೆ ಕುಮಟಾದಲ್ಲಿ ನಿಯಮಾನುಸಾರ ಇರಿಸಲಾಗಿದೆ. ಈ ಹಣ ಯಾರಿಗೆ ಸೇರಿದ್ದು, ಯಾವ ಪಕ್ಷಕ್ಕೆ ಸೇರಿದ್ದು ಎಂಬ ತನಿಖೆ ನಡೆಯುತ್ತಿದೆ. ಜಿಲ್ಲಾಚುನಾವಣಾ ಶಾಖೆ ಅಕ್ರಮ ಹಣ ಸಾಗಾಟದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿದೆ.