ಕಾರವಾರ: ಸೈಂಟ್ ಮೈಕಲ್ ಶಾಲೆಯಲ್ಲಿ ಡೊನೇಶನ್ ಪೂರ್ಣ ಪ್ರಮಾಣದಲ್ಲಿ ಪಾವತಿಸದ ವಿದ್ಯಾರ್ಥಿಗಳನ್ನು ಶಾಲಾ ಟೆಸ್ಟ್ ( ಉಪ ಪರೀಕ್ಷೆ)ನಿಂದ ಹೊರಗಿಟ್ಟ ಘಟನೆ ಮಂಗಳವಾರ ನಡೆದಿದೆ.
ನಗರದ ಖಾಸಗಿ ಶಾಲೆ ಸೈಂಟ್ ಮೈಕಲ್ ಗೆ ವಿದ್ಯಾರ್ಥಿಗಳ ಪೋಷಕರು ಶಾಲೆಯ ಡೊನೇಷನ್ ಶುಲ್ಕ ಪಾವತಿಸದಕ್ಕೆ ವಿದ್ಯಾರ್ಥಿಗಳಿಗೆ ಉಪ ಪರೀಕ್ಷೆ ಬರೆಯಲು ನಿರಾಕರಿಸಿದ್ದಲ್ಲದೇ, ಮುಖ್ಯೋಪಾಧ್ಯಾಯರ ಕೊಠಡಿಯ ಹೊರಗೆ ವಿದ್ಯಾರ್ಥಿಗಳನ್ನು ಕೂರಿಸಿ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ನಗರದ ಸರ್ಕಾರಿ ಅನುದಾನ ರಹಿತ ಸೆಂಟ್ ಮೈಕಲ್ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ನೆಡೆದಿದೆ.
ಮುಖ್ಯಶಿಕ್ಷಕಿ ಕ್ರಿಸ್ಟಿನಾ ಜೋಸೆಪ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯದಂತೆ ತಡೆದಿದ್ದಾರೆ. ಫಾರ್ಮೆಟಿವ್ ಅಸೈನ್ಮೆಂಟ್ ಎಂಬ ಪರೀಕ್ಷೆ ಬರೆಯಲು 6,7 ಮತ್ತು 8 ನೇ ತರಗತಿಯ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುಳಿತು ಕೊಳ್ಳಲು ನಿರಾಕರಣೆ ಮಾಡಲಾಗಿದೆ.
ಪ್ರತಿ ವಿದ್ಯಾರ್ಥಿಯಿಂದ ವರ್ಷಕ್ಕೆ 20 ಸಾವಿರ ಡೊನೇಷನ್ ಶಾಲಾ ಆಡಳಿತ ಮಂಡಳಿಯು (ಪೋಷಕರಿಂದ) ಸಂಗ್ರಹಿಸುತ್ತದೆ. ಹಲವು ಜನ ಕಂತಿನ ಮೂಲಕ ನೀಡುವುದರಿಂದ, ಕೆಲವು ಪೋಷಕರು ಪೂರ್ಣ ಹಣ ತುಂಬಿರಲಿಲ್ಲ. ಈ ಹಿನ್ನಲೆಯಲ್ಲಿ 6,7,8 ನೇತರಗತಿಯ ಶುಲ್ಕ ತುಂಬದ ಮಕ್ಕಳಿಗೆ ಪರೀಕ್ಷೆ ನಿರಾಕರಣೆ ಮಾಡಿ ದೌರ್ಜನ್ಯ ವೆಸಗಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಸರಕಾರ ಇಂತಹ ಖಾಸಗಿ ಶಾಲೆಗಳ ವಿರುದ್ದ ಕ್ರಮ ಜರುಗಿಸಬೇಕಾಗಿದೆ ಎಂದು ಪೋಷರು ಒತ್ತಾಯಿಸಿದ್ದಾರೆ.
ಶಾಲಾ ಆಡಳಿತ ಮಂಡಳಿ ಹಾಗೂ ಕೆಲ ಪೋಷಕರ ಮಧ್ಯೆ ಕೆಲ ತಿಂಗಳುಗಳಿಂದ ಡೋನೇಶನ್ ಸಂಬಂಧ ಘರ್ಷಣೆ ನಡೆಯುತ್ತಿದೆ.