Advertisement

Karwar; ಸೀಬರ್ಡ್ ಕಾರ್ಮಿಕ ಕಾಲೂನಿಯಲ್ಲಿ ಸಿಲಿಂಡರ್ ಸ್ಪೋಟ: ದಹಿಸಿದ ಶೆಡ್ ಗಳು

10:11 AM Mar 10, 2024 | Team Udayavani |

ಕಾರವಾರ: ಇಲ್ಲಿಗೆ ಸಮೀಪದ ನೌಕಾನೆಲೆ ಮುದಗಾ ಗ್ರಾಮದ ಸೀಬರ್ಡ್ ಕಾರ್ಮಿಕರ ಕಾಲೂನಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ನಾಲ್ಕು ಶೆಡ್ ಬೆಂಕಿಗೆ ಆಹುತಿಯಾಗಿವೆ. ರವಿವಾರ ಬೆಳಿಗ್ಗೆ ಈ ದುರ್ಘಟನೆ ನಡೆದಿದೆ.

Advertisement

ಶೆಡ್ ನಲ್ಲಿ ಭಾರೀ ಶಬ್ದ ‌ಕೇಳಿ ಕಾರ್ಮಿಕರು ಶೆಡ್ ‌ನಿಂದ ಹೊರಗೆ ಓಡಿ ಬಂದಿದ್ದಾರೆ. 150 ಶೆಡ್ ಗಳಲ್ಲಿ 500 ಕ್ಕೂ ಹೆಚ್ಚು ಕಾರ್ಮಿಕರು ವಾಸವಾಗಿದ್ದಾರೆ. ಬಹುತೇಕ ಎಲ್ಲರೂ ಹೊರ ರಾಜ್ಯದ ಕಾರ್ಮಿಕರಾಗಿದ್ದಾರೆ.

ಸಿಲಿಂಡರ್ ಸ್ಪೋಟದಿಂದ ನಾಲ್ಕು ಶೆಡ್ ಬೆಂಕಿಯಲ್ಲಿ ದಹಿಸಿವೆ. ಆಗ್ನಿ ಶಾಮಕದಳ ಬೆಂಕಿ‌ ನಂದಿಸಿದೆ.  ಹೆಚ್ಚಿನ ಅನಾಹುತ‌ ತಪ್ಪಿದೆ‌. ಪೊಲೀಸರು, ಅಗ್ನಿ ಶಾಮಕದಳ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next