ಕಾರವಾರ: ತಾಲೂಕಿನ ಹೋಟೆಗಾಳಿ ಭೀಮಕೋಲ್ ಅರಣ್ಯ ಪ್ರದೇಶದಲ್ಲಿ ಅಬಕಾರಿ ಇಲಾಖೆ ಇಂದು ದಾಳಿ ನಡೆಸಿದ್ದು, ಅಕ್ರಮ ಮದ್ಯಗಳನ್ನು ವಶಪಡಿಸಿಕೊಂಡಿದೆ.
ಗೋವಾದಿಂದ ಹೋಟೆಗಾಳಿ ಗ್ರಾಮಕ್ಕೆ ಅಕ್ರಮವಾಗಿ ಮದ್ಯ ತರುತ್ತಿರುವ ಖಚಿತ ಮಾಹಿತಿ ಪಡೆದ ಅಬಕಾರಿ ಇನ್ಸ್ ಪೆಕ್ಟರ್ ಸುವರ್ಣಾ ಬಿ.ನಾಯ್ಕ ಹಾಗೂ ಅವರ ತಂಡ ದಾಳಿ ನಡೆಸಿದೆ. ಈ ವೇಳೆ ಅಬಕಾರಿ ಅಧಿಕಾರಿಗಳ ಕಂಡು ಆರೋಪಿಗಳಾದ ಸಮೀರ ಮಾಳ್ಸೇಕರ್, ವಿನಯ ಪಡುವಳಕರ, ರಮಾಕಾಂತ ಮಾಳ್ಸೇಸೇಕರ್ ಮದ್ಯ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ವಶಪಡಿಸಿಕೊಂಡ ಗೋವಾ ಮದ್ಯವು ಸುಮಾರು 1.71,600.00ರೂ ಬೆಲೆಯದ್ದಾಗಿದೆ ಎಂದು ಅಬಕಾರಿ ಇನ್ಸ್ಪೆಕ್ಟರ್ ಸುವರ್ಣ ನಾಯ್ಕ ತಿಳಿಸಿದ್ದಾರೆ.
ಗೋವಾದಿಂದ ಅಕ್ರಮವಾಗಿ ಮದ್ಯ ತರುತ್ತಿದ್ದಾರೆಂಬ ಖಚಿತ ಮಾಹಿತಿ ಅಬಕಾರಿ ಕಾರವಾರ ವಲಯದ ಅಧಿಕಾರಿಗಳಿಗೆ ಸಿಕ್ಕ ಕಾರಣ, ಅರಣ್ಯದ ಮರ ಗಿಡಗಳ ಮಧ್ಯೆ ಅಡಗಿ ಕುಳಿತಿದ್ದಾರೆ. ಈ ವೇಳೆ ಆರೋಪಿಗಳು ತಲೆಯ ಮೇಲೆ ಮದ್ಯ ಹೊತ್ತು ತರುತ್ತಿದ್ದರು ಎನ್ನಲಾಗಿದೆ. ಆದರೇ ಅಧಿಕಾರಿಗಳ ಕಂಡು ಆರೋಪಿಗಳು ತಲೆ ಹೊರೆ ಬಿಸಾಡಿ ಕಾಡಲ್ಲಿ ಪರಾರಿಯಾಗಿದ್ದಾರೆ. ಇದೀಗ ಮದ್ಯ ಅಕ್ರಮ ಸಾಗಾಟದಾರರ ಮೇಲೆ ಪ್ರಕರಣ ದಾಖಲಿಸಲಾಗಿದೆ.