Advertisement
ಪ್ರಸ್ತುತ ಈ ರೈಲು ಬೆಂಗಳೂರಿನಿಂದ ಹೊರಟು ಮೈಸೂರು ಮಾರ್ಗವಾಗಿ ಕಾರವಾರಕ್ಕೆ ಸುತ್ತಿಬಳಸಿ ಸಂಚರಿಸುತ್ತಿರುವುದರಿಂದ ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಅದರ ಬದಲು ಈ ರೈಲು ಮೈಸೂರಿನಿಂದ ಹೊರಟು ಬೆಂಗಳೂರು ಮೂಲಕ ಕುಣಿಗಲ್-ಹಾಸನ ಮಾರ್ಗವಾಗಿ ಕಾರವಾರಕ್ಕೆ ಸಂಚರಿಸಿದರೆ ಕರಾವಳಿ ಭಾಗದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ. ಜತೆಗೆ ಮೈಸೂರು, ಬೆಂಗಳೂರಿ ನಿಂದ ನೇರವಾಗಿ ಮಂಗಳೂರಿಗೆ ರೈಲುಸಂಪರ್ಕ ಕೂಡ ದೊರೆಯಲಿವೆ. ಹೀಗಾಗಿ ಪ್ರಸ್ತುತ ಸಂಚರಿಸುತ್ತಿರುವ ಬೆಂಗಳೂರು-ಕಾರವಾರ ರಾತ್ರಿ ರೈಲಿನ ಮಾರ್ಗಬದಲಾವಣೆ ಮಾಡುವಂತೆ ಸಭೆ ಆಗ್ರಹಿಸಿದೆ.ಕುಡ್ಲ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಸ್ತುತ ಇರುವ ರೈಲುಗಳ ಸಂಚಾರ, ಆಗಬೇಕಾದ ಬದಲಾವಣೆಗಳು ಹಾಗೂ ಬೇಡಿಕೆಗಳ ಈಡೇರಿಕೆಗೆ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಿತು. ಎ. 9ರಂದು ಉದ್ಘಾಟನೆಗೊಂಡ ಹಗಲು ಸಂಚಾರದ ಕುಡ್ಲ ಎಕ್ಸ್‌ಪ್ರೆಸ್ ರೈಲು ಕಾರವಾರದ ವರೆಗೆ ವಿಸ್ತರಣೆಗೊಳ್ಳಬೇಕು, ಆ ಮೂಲಕ ಸಮಸ್ತ ಕರಾವಳಿಗರಿಗೂ ರಾಜ್ಯ ರಾಜಧಾನಿಯೊಂದಿಗೆ ಬೆಸೆಯಲು ಸುಲಭ ಸಾಧ್ಯವಾಗಬೇಕು, ಕುಡ್ಲ ಎಕ್ಸ್‌ಪ್ರೆಸ್ ಹಗಲು ಸಮಯದ ಬದಲಿಗೆ ರಾತ್ರಿ ಸಂಚರಿಸುವ ರೈಲಾಗಬೇಕು, ಬೆಂಗಳೂರಿನಿಂದ ಕರಾವಳಿಗೆ ರಾತ್ರಿ ರೈಲು ಬೇಕು ಮೊದಲಾದ ಬೇಡಿಕೆಗಳು ಸಭೆಯಲ್ಲಿ ವ್ಯಕ್ತವಾಯಿತು.