Advertisement

ಹರಿದು ಬಂದ ಜನಸಾಗರ, ಕರುಣಾನಿಧಿಗೆ ಅಂತಿಮ ವಿದಾಯ, CM ಗೈರು

06:58 PM Aug 08, 2018 | Sharanya Alva |

ಚೆನ್ನೈ: ದ್ರಾವಿಡ ಮುನ್ನೇತ್ರ ಕಳಗಂ ಪರಮೋಚ್ಚ ನಾಯಕ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ(94ವರ್ಷ) ಅವರ ಪಾರ್ಥಿವ ಶರೀರಕ್ಕೆ ಯಾವುದೇ ವಿಧಿ, ವಿಧಾನ ಇಲ್ಲದೇ ಮೌನ ಆಚರಣೆ ಬಳಿಕ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು

Advertisement

ಶ್ರೀಗಂಧದ ಮರದಿಂದ ವಿಶೇಷವಾಗಿ ಶವ ಪೆಟ್ಟಿಗೆಯನ್ನು ಸಿದ್ಧಪಡಿಸಲಾಗಿತ್ತು. ಪೆಟ್ಟಿಗೆ ಮೇಲೆ ಕರುಣಾನಿಧಿ ಅವರು ಸುಮಾರು 30 ವರ್ಷಗಳ ಹಿಂದೆ ಬರೆದಿದ್ದ ‘ವಿಶ್ರಾಂತಿ ಇಲ್ಲದೆ ದುಡಿಯುವವನಿಗೆ ಇದು ವಿಶ್ರಾಂತಿಯ ತಾಣ ಎಂದು ಬರೆದಿದ್ದರು. ಅದೇ ಸಾಲನ್ನು ಪೆಟ್ಟಿಗೆ ಮೇಲೆ ಬರೆಯಿಸಲಾಗಿತ್ತು.

ಮರೀನಾ ಬೀಚ್ ನಲ್ಲಿ ಗುರು ಅಣ್ಣಾದೊರೈ ಸಮಾಧಿ ಸಮೀಪವೇ ಎಂ.ಕರುಣಾನಿಧಿ ಅವರ ಸಮಾಧಿ ಮಾಡಲು ಸಿದ್ಧತೆ ಮಾಡಿದ್ದು, ಕರುಣಾನಿಧಿ ಕುಟುಂಬಸ್ಥರು, ಸೇನಾಪಡೆಗಳು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಚೆನ್ನೈನ ರಾಜಾಜಿ ಹಾಲ್ ನಿಂದ ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ಮೆರವಣಿಗೆ ಹೊರಟು ಕಾಮರಾಜ್ ರಸ್ತೆಯ ಮೂಲಕ ಮರೀನಾ ಬೀಚ್ ವರೆಗೆ ಕೊಂಡೊಯ್ಯಲಾಯಿತು. ಮೆರವಣಿಗೆ ಸಾಗುವ ಸುಮಾರು ಮೂರು ಕಿಲೋ ಮೀಟರ್ ದೂರದವರೆಗೆ ಜನಸಾಗರ ತುಂಬಿತ್ತು.

ಮರೀನಾ ಬೀಚ್ ನಲ್ಲಿ ಅಣ್ಣಾದೊರೈ ಸಮಾಧಿ ಸಮೀಪವೇ ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಸಿಎಂ ಕರುಣಾನಿಧಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Advertisement

ಗಣ್ಯರಿಂದ ಅಂತಿಮ ನಮನ:

ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು.

ಅಂತ್ಯಕ್ರಿಯೆಗೆ ಸಿಎಂ ಗೈರು:

ಮಾಜಿ ಸಿಎಂ ಕರುಣಾನಿಧಿ ಅವರ ಅಂತ್ಯಸಂಸ್ಕಾರದ ವೇಳೆ ತಮಿಳುನಾಡು ಹಾಲಿ ಸಿಎಂ ಪಳನಿಸ್ವಾಮಿ ಗೈರುಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next